ನ.16ರಂದು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Update: 2023-11-08 15:53 GMT

ಬಜ್ಪೆ, ನ.8: ಇಲ್ಲಿನ ಚತುಷ್ಪಥ ರಸ್ತೆಯ ಅವ್ಯವಸ್ಥೆ ಮತ್ತು ಅಧಿಕಾರಿಗಳ ತೋರುತ್ತಿರುವ ಬೇಜವಾಬ್ದಾರಿ ವಿರುದ್ಧ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯು ನ.16ರಂದು ಬಜ್ಪೆಯಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ಮಂಗಳವಾರ ರಾತ್ರಿ ಬಜ್ಪೆ ಎಂಜೆಎಂ ಸಭಾಭವನದಲ್ಲಿ ಸಭೆ ನಡೆಸಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಈ ನಿರ್ಣಯವನ್ನು ಕೈಗೊಂಡಿತು.

ಸಭೆಯಲ್ಲಿ ಮಾತನಾಡಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್‌ ಬಜ್ಪೆ, ಇಲ್ಲಿನ ಹೆದ್ದಾರಿಯ ಅವ್ಯವ ಸ್ಥೆಯ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಾಗರೀಕರು ಹಲವು ಬಾರಿ ದೂರು ನೀಡಿ ಸೂಕ್ತ ಕ್ರಮವಹಿಸಲು ಆಗ್ರಹಿಸಿ ದ್ದರು. ಆ ಬಳಿಕ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆಗಳನ್ನು ಮಾಡಿ ಮನವಿಗಳನ್ನು ಸಲ್ಲಿಸ ಲಾಯಿತು. ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲತೆಗಳನ್ನು ಗಮನಿಸಿ ಬಂದ್‌ ಮಾಡಿದ್ದ ಹೆದ್ದಾರಿಯನ್ನು ಸಮಿತಿ ವೆಚ್ಚಭರಿಸಿ ದುರಸ್ತಿ ಕಾರ್ಯಗಳನ್ನು ಮಾಡಿತ್ತು. ಆಬಳಿಕವೂ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯ ಧೊರಣೆಯನ್ನು ಮುಂದುವರಿಸಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಹೀಗಾಗಿ ನ.16ರಂದು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯು ಬಜ್ಪೆ ಪೇಟೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಸರ್ವ ಧರ್ಮೀ ಯರ ಸಹಕಾರ ಮತ್ತು ರಾಜಕೀಯ ರಹಿತವಾಗಿ ಬೃಹತ್‌ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ದೇವದಾಸ್, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಸಹ ಸಂಚಾಲಕ ಇಂಜಿನಿಯರ್ ಇಸ್ಮಾಯಿಲ್, ಎಂಜೆಎಂ ಮಸೀದಿಯ ಅಧ್ಯಕ್ಷ ಖಾದರ್ ಸಾಬ್, ಅಥಾವುಲ್ಲಾ ಜೋಕಟ್ಟೆ, ದಲಿತ ಸಂಘ ಸಮಿತಿಯ ರಾಕೇಶ್ ಕರಂಬಾರ್, ಹಿರಿಯರಾದ ಥೋಮಸ್, ಎಸ್ಎಸ್ಎಫ್ ಮುಖಂಡರಾದ ಸಲೀಲ್ ಡಿಲಕ್ಸ್ , ಮುಫೀದ್, ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ, ರಹಿಮಾನ್ ಕಳವಾರು, ಅಝರ್, ಅನ್ವರ್ ಬಜ್ಪೆ, ಹಕೀಮ್ ಕೊಳಂಬೆ, ಅಶ್ರಫ್ ಕೊಳಂಬೆ, ಏರ್ಪೋರ್ಟ್ ಹಕೀಮ್, ದಲಿತ ಸಂಘ ಸಮಿತಿಯ ಲಕ್ಷ್ಮೀಶ, ಹಿರಿಯರಾದ ಮೋನು, ಅಬ್ಬಾಸ್ ಸೂರಲ್ಪಾಡಿ, ಇರ್ಷಾದ್ ಬಜ್ಪೆ, ಅಶ್ರಫ್ ಜೋಕಟ್ಟೆ, ಇಕ್ಬಾಲ್ ಪ್ಯಾರಾ, ಹಸೈನಾರ್ ಬಜ್ಪೆ, ನಿಸಾರ್ ಮಾರ್ಕೆಟ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮುಹಮದ್ ಶರೀಫ್, ಸದಸ್ಯರಾದ ಜೇಕಬ್ ಪಿರೇರಾ, ನಝೀರ್ ಕಿನ್ನಿಪದವು, ಮನ್ಸೂರು, ಕುಡುಂಬಿ ಸಮಾಜದ ನಾಯಕರಾದ ಶೇಖರ್ ಗೌಡ ,ಮುಖಂಡರಾದ ಯಶೋದರ ಆಚಾರ್ಯ ಮತ್ತು ಊರಿನ ಸಂಘ ಸಂಸ್ಥೆಯ ನಾಯಕರು ಮತ್ತು ಊರಿನ ಹಿರಿಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News