ಪಜೀರು ಗ್ರಾ.ಪಂ: ಅಧ್ಯಕ್ಷರಾಗಿ ಮಹಮ್ಮದ್ ರಫೀಕ್ , ಉಪಾಧ್ಯಕ್ಷೆಯಾಗಿ ಫ್ಲೋರಿನ್ ಡಿಸೋಜ ಆಯ್ಕೆ

Update: 2023-08-09 12:40 GMT

ಕೊಣಾಜೆ : ಪಜೀರು ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಕಾಂಗ್ರೆಸ್ ಬೆಂಬಲಿತರಾದ ರಫೀಕ್ ಅಧ್ಯಕ್ಷರಾಗಿ, ಉಪಾಧ್ಯಕ್ಷೆಯಾಗಿ ಫ್ಲೋರಿನ್ ಡಿಸೋಜ ಅವಿರೋಧವಾಗಿ ಆಯ್ಕೆಯಾದರು.

ಪಜೀರು ಪಂಚಾಯಿತಿ 12 ಕಾಂಗ್ರೆಸ್, 4 ಎಸ್ ಡಿಪಿಐ ಹಾಗೂ ಒಂದು ಬಿಜೆಪಿ ಬೆಂಬಲಿತ ಸದಸ್ಯರನ್ನು ಒಳಗೊಂಡಿತ್ತು‌. ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳ ಬೆಂಬಲದಿಂದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.

ನೂತನ ಆಡಳಿತವನ್ನು ಶುಭಹಾರೈಸಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ, ವಿವಿಧ ಗ್ರಾಮಗಳಲ್ಲಿ ನಾಮಿನೇಷನ್ ಹಾಕುವ ಪ್ರಕ್ರಿಯೆಗಳು ಬಹಳಷ್ಟು ನಡೆಯುತ್ತವೆ. ಆದರೆ ಪಜೀರು ಗ್ರಾಮದಲ್ಲಿ ನಡೆದ ಅವಿರೋಧ ಆಯ್ಕೆ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಅಧಿಕಾರ ನಂತರದ ಜವಾಬ್ದಾರಿ ಮಹತ್ತರವಾದದ್ದು. ಗ್ರಾಮಮಟ್ಟದ ಕಾರ್ಯ ಸುಲಭದ ವಿಚಾರಗಳಲ್ಲ. ಕಾನೂನಿನಡಿ ವ್ಯತ್ಯಾಸಗಳಿವೆ, ಜನಸಾಮಾನ್ಯರಿಗೆ ಅನುಕೂಲ ವಾಗುವ ಸಂಬಂಧಪಟ್ಟ ಇಲಾಖೆಯನ್ನು ಪರಿಗಣಿಸಿ , ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವೆಲ್ಲವನ್ನೂ ಸರಿದೂಗಿಸಿ ಆಡಳಿತವನ್ನು ಕೊಂಡೊಯ್ಯಬೇಕಿದೆ. ಸಾಮಾನ್ಯ ಹಾಗೂ ಮಧ್ಯಮವರ್ಗದವರೇ ಗ್ರಾಮಮಟ್ಟದಲ್ಲಿ ಹೆಚ್ವಾಗಿ ಇರುವುದರಿಂದ ಅಧಿಕಾರಿ ವರ್ಗ ಹಾಗೂ ಆಡಳಿತ ಜವಾಬ್ದಾರಿಯುತವಾಗಿ ನಡೆದುಕೊಂಡು ಮುಂದುವರಿಯಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಮೂರು ಧರ್ಮಗಳ ಸಮ್ಮಿಲನ ಕೇಂದ್ರ ಪಜೀರು ಗ್ರಾಮವಾಗಿದೆ. ಎಲ್ಲರೂ ಜವಾಬ್ದಾರಿಯುತವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಕೆ.ರಫೀಕ್ ಮಾತನಾಡಿ, ಬಾಕಿಯುಳಿದ ಕುಡಿಯುವ ನೀರಿ‌ನ ಯೋಜನೆಗೆ ಶ್ರಮ ವಹಿಸುವೆನು. ಹಕ್ಕುಪತ್ರ ವಿಚಾರಣೆ ನಡೆಸಿ ಫಲಾನುಭವಿಗಳಿಗೆ ಸಿಗುವ ವ್ಯವಸ್ಥೆ, ಧಾರ್ಮಿಕ ಮುಖಂಡರು, ಗ್ರಾಮದ ಹಿರಿಯರ, ರಾಜಕೀಯ ಮುಖಂಡರುಗಳ ಸಹಕಾರದೊಂದಿಗೆ, ಸಲಹೆಯನ್ನು ಪಡೆದುಕೊಂಡು ಆಡಳಿತ ನಡೆಸುವೆನು ಎಂದರು.

ಈ ಸಂದರ್ಭ ಪದ್ಮನಾಭ ನರಿಂಗಾನ, ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್, ಅಬ್ದುಲ್ ಜಲೀಲ್ ಮೋಂಟುಗೋಳಿ, ಅಬ್ದುಲ್ ರಝಾಕ್ ಕುಕ್ಕಾಜೆ, ಹೈದರ್ ಕೈರಂಗಳ, ಗ್ರಾ.ಪಂ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪೆರ್ನೆ, ಭರತ್ ರಾಜ್ ಶೆಟ್ಟಿ, ಜಗದೀಶ್ ಆಳ್ವ ಕುವೆತ್ತಬೈಲ್, ಜಯಂತ್ ಶೆಟ್ಟಿ ಕಂಬ್ಳಪದವು, ವಿಜೇತ್ ಪಜೀರ್, ಗ್ರಾಮದ ಮಸೀದಿ ಅಧ್ಯಕ್ಷರುಗಳಾದ ಅಬ್ದುಲ್ ಖಾದರ್, ಅಬ್ದುಲ್ ಹಮೀದ್, ಮಹಮ್ಮದ್ ಕುಂಞಿ, ಅಬ್ದುಲ್ ರಹಿಮಾನ್, ಸುಬ್ರಾಯ ಪೂಜಾರಿ ಅಡ್ಕ, ಶ್ರೀಕಾಂತ್ ಎಲ್ಯಾರಪದವು, ನಾಸಿರ್ , ಲಕ್ಷ್ಮಣ್ ಸಾಲಿಯಾನ್, ಮಾರಪ್ಪ ಪಜೀರ್, ಅಬ್ದುಲ್ ಹಮೀದ್ ಪಿ.ಎ, ಅಚ್ಚುತ್ತ ಗಟ್ಟಿ, ರೆಹಮಾನ್ ಕೋಡಿಜಾಲ್, ಅಮೀರ್ ಕೋಡಿಜಾಲ್, ನವಾಝ್ ನರಿಂಗಾನ, ಮುರಳೀಧರ್ ಶೆಟ್ಟಿ, ಸಿ.ಎಂ ಶರೀಫ್, ಮೂಸಕುಂಞಿ, ನಝೀರ್ ಮೊಯ್ದೀನ್, ಮೇರಿ ಫೆರ್ನಾಂಡಿಸ್, ಮಹಮ್ಮದ್ ಪಾನೇಲ, ಮೀನಾಕ್ಷಿ, ಸೆವರೀನ್ ಡಿಸೋಜ, ಝೊಹರ ಪಾನೇಲ, ಶೇಖರ್ ಬೀಜಗುರಿ ಉಪಸ್ಥಿತರಿದ್ದರು.

ಸಮೀರ್ ಪಜೀರ್ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News