ಪೊಲೀಸ್ ಹೆಡ್‍ಕಾನ್‍ಸ್ಟೇಬಲ್ ಬಾಲಕೃಷ್ಣ ಗೌಡ ನಿಧನ
Update: 2023-09-09 15:27 GMT
ಸುಳ್ಯ: ದುಗ್ಗಲಡ್ಕದ ಕುಂಬೆತ್ತಿಬನ ನಿವಾಸಿ ಪುತ್ತೂರು ಡಿವೈಎಸ್‍ಪಿ ಕಚೇರಿಯಲ್ಲಿ ಹೆಡ್‍ಕಾನ್‍ಸ್ಟೇಬಲ್ ಆಗಿ ಕರ್ತವ್ಯದಲ್ಲಿದ್ದ ಬಾಲಕೃಷ್ಣ ಗೌಡ ಕೊಯಿಕುಳಿ (57)ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಮಂಜಾನೆ 5 ಗಂಟೆಯ ವೇಳೆಗೆ ಅಸ್ವಸ್ಥರಾದ ಅವರನ್ನು ಮನೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರೆಳೆದರು.
ಬಾಲಕೃಷ್ಣ ಗೌಡರು ಸುಳ್ಯ ಪೊಲೀಸ್ ಠಾಣೆ ಸಿಬ್ಬಂದಿ. ನಿಯೋಜನೆ ಮೇರೆಗೆ ಪುತ್ತೂರಿನಲ್ಲಿ ಕರ್ತವ್ಯದಲ್ಲಿದ್ದರು. ಮೂರು ದಿನಗಳ ಹಿಂದೆ ಅವರು ಮತ್ತೆ ಸುಳ್ಯ ಠಾಣೆಗೆ ಕರ್ತವ್ಯಕ್ಕೆ ಬಂದಿದ್ದರು.
ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಸಹೋದರರನ್ನು ಅಗಲಿದ್ದಾರೆ.