ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಸ್ತಿತ್ವ ಉಳಿಸಲು ಆಗ್ರಹಿಸಿ ಪ್ರತಿಭಟನೆ

Update: 2023-11-23 14:51 GMT

ಮಂಗಳೂರು, ನ.23: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಪಂ ಸಿಇಒ ಅವರ ಅಧೀನಕ್ಕೆ ಒಳಪಡಿಸುವಂತೆ ಹೊರಡಿಸಿದ ಸುತ್ತೋಲೆಯನ್ನು ವಾಪಸ್ ಪಡೆದುಕೊಂಡು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಸ್ತಿತ್ವವನ್ನು ಉಳಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜು ನೌಕರರ ಕ್ರಿಯಾ ಸಮಿತಿಯು ಗುರುವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಹೆಸರನ್ನು ಬದಲಾವಣೆ ಮಾಡಿರುವುದನ್ನು ಸರಿಪಡಿಸಬೇಕು. ಪಿಯುನಲ್ಲಿ ಶೈಕ್ಷಣಿಕ ಹಾಗೂ ಪರೀಕ್ಷಾ ವಿಭಾಗ ಎಂದು ಪ್ರತ್ಯೇಕಿಸಿರುವುದನ್ನು ಕೈ ಬಿಡಬೇಕು. ವರ್ಷದಲ್ಲಿ ಮೂರು ಪರೀಕ್ಷೆಯ ಅವೈಜ್ಞಾನಿಕ ಪದ್ದತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ದ.ಕ.ಜಿಲ್ಲಾ ಪ.ಪೂ. ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ, ದ.ಕ. ಜಿಲ್ಲಾ ಪ.ಪೂ. ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅರುಣ್ ಡಿಸೋಜ, ದ.ಕ.ಜಿಲ್ಲಾ ಪ.ಪೂ. ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರನಾಥ, ದ.ಕ. ಜಿಲ್ಲಾ ಪ.ಪೂ. ಶಿಕ್ಷಣ ಇಲಖೆಯ ಬೋಧೇಕೇತರ ನೌಕರರ ಸಂಘದ ಅಧ್ಯಕ್ಷ ನಿತಿನ್ ಬಿ.ಟಿ, ಪ.ಪೂ. ಅನುದಾನಿತ ಕಾಲೇಜು ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್, ವಿಠಲ್ ಎ, ಗಂಗಾಧರ ಆಳ್ವ, ಯೂಸುಫ್, ಅನುಸೂಯ, ರತ್ನಾಕರ ಬನ್ನಾಡಿ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News