ಮಣಿಪುರ ಹಿಂಸಾಚಾರ ಖಂಡಿಸಿ ಮಂಗಳೂರು ಧರ್ಮಪ್ರಾಂತದ ಚರ್ಚ್‌ಗಳಲ್ಲಿ ಮೌನ ಪ್ರತಿಭಟನೆ

Update: 2023-07-23 13:57 GMT

ಮಂಗಳೂರು, ಜು.23: ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಮಂಗಳೂರು ಧರ್ಮಪ್ರಾಂತದ 124 ಚರ್ಚ್‌ಗಳಲ್ಲಿ ರವಿವಾರ ಬಲಿಪೂಜೆಯ ಬಳಿಕ ಮೌನ ಪ್ರತಿಭಟನೆ ನಡೆಯಿತು.

ನಗರದ ಮಿಲಾಗ್ರಿಸ್, ರೊಸಾರಿಯೋ, ಉರ್ವ, ಅಶೋಕನಗರ, ಬಿಜೈ, ಕೂಳೂರು ಮತ್ತಿತರ ಚರ್ಚ್‌ಗಳಲ್ಲಿ ಬಲಿಪೂಜೆಯ ಬಳಿಕ ಕಪ್ಪು ಪಟ್ಟಿ ಧರಿಸಿ, ಫಲಕಗಳನ್ನು ಹಿಡಿದುಕೊಂಡು ಮಣಿಪುರದ ಹಿಂಸಾಚಾರ ಘಟನೆಯನ್ನು ಖಂಡಿಸಲಾಯಿತು.

ಕೆಲವು ಚರ್ಚ್‌ಗಳಲ್ಲಿ ಧರ್ಮಗುರುಗಳು ಮಣಿಪುರದ ಹಿಂಸಾಚಾರದ ಬಗ್ಗೆ ಮಾಹಿತಿ ನೀಡಿದರೆ, ಇನ್ನು ಕೆಲವು ಕಡೆಗಳಲ್ಲಿ ಚರ್ಚ್‌ಗಳ ಆವರಣದ ಹೊರಗಡೆ ಗಾಳಿ-ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿ ಹಿಂಸಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಥೋಲಿಕ್ ಸಭಾ ನೀಡಿದ ಕರೆಯಂತೆ ಇಂದು ಎಲ್ಲಾ ಚರ್ಚ್‌ಗಳಲ್ಲಿ ಪ್ರತಿಭಟನೆ ನಡೆಸಿದೆ. ಜು.27ರಂದು ಸಂಜೆ 4ಕ್ಕೆ ಮಂಗಳೂರಿನ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳೂರು ಧರ್ಮಪ್ರಾಂತದ ಪಿಆರ್‌ಒ ಫಾ.ಜೆ.ಬಿ. ಸಲ್ಡಾನ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News