ಕ್ರೀಡಾ ಸಾಧನೆಯು ಉದ್ಯೋಗಾವಕಾಶದ ಜೊತೆಗೆ ಭವಿಷ್ಯ ಗಟ್ಟಿಗೊಳಿಸಲು ಸಹಕಾರಿ : ಶಾಸಕ ಅಶೋಕ್ ರೈ

Update: 2023-09-30 13:14 GMT

ಪುತ್ತೂರು : ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗ ಅವಕಾಶಗಳು ದೊರೆಯಲಿದ್ದು, ಕ್ರೀಡಾ ಆಸಕ್ತರು ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ತನ್ನ ಮುಂದಿನ ಭವಿಷ್ಯವನ್ನು ಗಟ್ಟಿಗೊಳಿಸಿಗೊಳಿಸಲು ಸಹಕಾರಿಯಾಗಿದೆ. ಕ್ರೀಡಾ ಆಸಕ್ತರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಶಾಸಕ ಅಶೋಕ್‍ ಕುಮಾರ್ ರೈ ಅವರು ಹೇಳಿದರು.

ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಶನಿವಾರ ಖ್ಯಾತ ಕಬಡ್ಡಿ ಆಟಗಾರರಾಗಿದ್ದ ಉದಯ ಚೌಟ ಸ್ಮರಣಾರ್ಥವಾಗಿ ನಡೆದ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಮ್ಯಾಟ್ ಅಂಕಣದ ಅಹರ್ನಿಶಿ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪುತ್ತೂರಿನ ಪ್ರತಿಭೆಗಳು ಇನ್ನೂ ಒಂದಿಷ್ಟು ಸಾಧನೆಗಳನ್ನು ಮಾಡುವ ಮೂಲಕ ಪುತ್ತೂರಿನ ಹೆಸರನ್ನು ಹತ್ತೂರಿಗೆ ಪಸರಿಸುವಂತಾಗಲಿ ಎಂದು ತಿಳಿಸಿದರು.

ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅವರು ಉದ್ಘಾಟಿಸಿ ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿಶ್ವನಾಥ ರೈ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ಮುರಳೀಧರ ರೈ ಮಠಂತಬೆಟ್ಟು, ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಿಜಯಹಾರ್ವಿನ್, ಪ್ರವೀಣ್ಚಂದ್ರ ಆಳ್ವ, ಉದ್ಯಮಿ ಶಿವರಾಮ ಆಳ್ವ, ಉದ್ಯಮಿ ಸುದೇಶ್ ಶೆಟ್ಟಿ, ಎನ್. ಚಂದ್ರಹಾಸ ಶೆಟ್ಟಿ, ಸುರೇಂದ್ರ ರೈ ಬಳ್ಳಮಜಲು, ದಯಾನಂದ ರೈ ಕೋರ್ಮಂಡ, ಕೃಷ್ಣಪ್ರಸಾದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೋರ್ದಾಳ್ ನಿರೂಪಿಸಿದರು.

ಆರಂಭದಲ್ಲಿ ನಡೆದ 4 ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯಾಟದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ತಂಡ ಪ್ರಥಮ ಹಾಗೂ ಪೊಲೀಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News