ʼSSF ಗೋಲ್ಡನ್ 50ʼ ಕೆಸಿಎಫ್ ಅಬುಧಾಬಿ ವತಿಯಿಂದ ನಡೆಯಲಿರುವ ಪ್ರಚಾರ ಸಭೆಯ ಪೋಸ್ಟರ್ ಬಿಡುಗಡೆ

Update: 2023-08-06 13:09 GMT

ಅಬುಧಾಬಿ: ಸುನ್ನೀ ಸ್ಟೂಡೆಂಟ್ ಫೆಡರೇಶನ್ ಇದರ 50ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಸೆಪ್ಟಂಬರ್ 10 ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶ ನಡೆಯಲಿದೆ.

ಇದರ ಪ್ರಚಾರರ್ಥ, ಯುಎಇಯ ವಿವಿಧೆಡೆ ನಡೆಯಲಿರುವ G-meet ಸಭೆಯ ಅಂಗವಾಗಿ ಅಬುಧಾಬಿ ಕೆಸಿಎಫ್ ವತಿ ಯಿಂದ ನಡೆಯಲಿರುವ ಪ್ರಚಾರ ಸಭೆಯ ಪೋಸ್ಟರ್ ಅನ್ನು ಇತ್ತೀಚೆಗೆ ಕೆಸಿಎಫ್ ಅಬುಧಾಬಿ ಸಭಾ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ಕೇರಳ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮತ್ತು ಪ್ರಮುಖ ಧಾರ್ಮಿಕ ನೇತಾರ ಸೈಯದ್ ಖಲೀಲ್ ಅಲ್ ಬುಖಾರಿ ತಂಙಳ್ ಪೋಸ್ಟರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, SSF ಅನ್ನು ಉಳಿಸಿ ಬೆಳೆಸುವುದು ಮುಸ್ಲಿಂ ಸಮಾಜದ ಕರ್ತವ್ಯವಾಗಿದ್ದು, ಅದಕ್ಕಾಗಿ ಸರ್ವ ರೀತಿಯ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.

ಸಮಾರಂಭದಲ್ಲಿ ಕೆಸಿಎಫ್ ಅಂತರ್‌ರಾ ಷ್ಟ್ರೀಯ ಸಮಿತಿಯ ಕರೀಂ ಮುಸ್ಲಿಯಾರ್, ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಫೈಝಲ್ ಕೃಷ್ಣಾಪುರ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಹಕೀಮ್ ತುರ್ಕಳಿಕೆ, ಕೆಸಿಎಫ್ ಅಬುಧಾಬಿ ಸಮಿತಿಯ ಅಧ್ಯಕ್ಷ ಹಸೈನಾರ್ ಅಮಾನಿ, ಕಬೀರ್ ಬಾಯಂಬಾಡಿ ನವಾಝ್ ಕೋಟೆಕಾರ್ ಮತ್ತಿತರ ನಾಯಕರು ಭಾಗವಹಿಸಿದ್ದರು.

ಕೆಸಿಎಫ್ ಅಬುಧಾಬಿ ವತಿಯಿಂದ ನಡೆಯಲಿರುವ ಪ್ರಚಾರ ಸಭೆಯು ಆಗಸ್ಟ್ 12ರಂದು ಅಬುಧಾಬಿ ನಗರದ ಐಸಿಎಫ್ ಸಭಾ ಭವನದಲ್ಲಿ ನಡೆಯಲಿದ್ದು ಕರ್ನಾಟಕ ರಾಜ್ಯ SSF ಅಧ್ಯಕ್ಷ ಸುಫ್ಯಾನ್ ಸಖಾಫಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News