ಸಹಪಾಠಿಯ ಜೀವ ರಕ್ಷಿಸಿದ ವಿದ್ಯಾರ್ಥಿನಿಗೆ ಅಭಿನಂದನೆ
ಉಳ್ಳಾಲ: ವಿದ್ಯುತ್ ಆಘಾತಕ್ಕೊಳಗಾದ ಸಹಪಾಠಿಯ ಜೀವ ರಕ್ಷಿಸಿದ ಇರಾ ಸರಕಾರಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಫಾತಿಮಾತ್ ಅಶ್ಫಿಯಾ ಅವರನ್ನು ನಮ್ಮ ನಾಡ ಒಕ್ಕೂಟ, ಮಂಗಳೂರು ಕಮ್ಯೂನಿಟಿ ಸೆಂಟರ್ ಇದರ ವತಿಯಿಂದ ಅಭಿನಂದಿಸಲಾಯಿತು.
ತೊಕ್ಕೊಟ್ಟು ನಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಎನ್ ಎನ್ ಒ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಸ್ಟರ್ "ಸಹಪಾಠಿ ವಿದ್ಯಾರ್ಥಿನಿಯ ಜೀವ ರಕ್ಷಿಸಿದ ಈ ಪುಟ್ಟ ಬಾಲಕಿ ಆ ಸಂದರ್ಭದಲ್ಲಿ ತೋರಿದ ಧೈರ್ಯ ಎಲ್ಲಾ ಮಕ್ಕಳಿಗೆ ಪ್ರೇರಣೆ ಯಾಗಿದೆ. ಇಂತಹ ಮಕ್ಕಳಿಗೆ ಈ ರೀತಿ ಅಭಿನಂದನೆ ಸಲ್ಲಿಸುವುದರ ಮೂಲಕ ಮಕ್ಕಳು ಎಲ್ಲಾ ವಿಷಯದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.
ದ.ಕ ಜಿಲ್ಲಾ ಕಾಂಗ್ರೆಸ್ ವಕ್ತಾರ ಮೊಹಶೀರ್ ಮಾತನಾಡಿ, ಇದೊಂದು ಅರ್ಥ ಪೂರ್ಣ ಕಾರ್ಯಕ್ರಮ, ಮಕ್ಕಳನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿದೆ ಎಂದರು.
ಕಾರ್ಯಕ್ರಮ ದಲ್ಲಿ ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹುಸೇನ್ ಕಾರ್ಕಳ, ಕೋಶಾಧಿಕಾರಿ ಅಬ್ದುಲ್ ಹಮೀದ್ ರೋಯಲ್ ಮೂಡಬಿದ್ರಿ, ವಕೀಲರಾದ ರೋಷನ್ ಡಿಸೋಜಾ, ಹಿರಾ ಕಾಲೇಜ್ ನ ಪಿಆರ್ ಒ ನಿಝಾಮ್, ಹಾಗೂ ವಿದ್ಯಾರ್ಥಿನಿಯ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಫೀಕ್ ಮಾಸ್ಟರ್ ಸ್ವಾಗತಿಸಿ, ಸಂಸ್ಥೆಯ ಟ್ರಸ್ಟಿ ನ್ಯಾಯವಾದಿ ಶೇಕ್ ಇಸಾಕ್ ವಂದಿಸಿದರು.
ಈಕೆ ಮುಜೀಬ್ ರಹ್ಮಾನ್ ಮತ್ತು ಲುಬಾಬ ದಂಪತಿಯ ಪುತ್ರಿ.