ಸುರತ್ಕಲ್‌: ಶ್ರೇಣಿ ಗೋಪಾಲ ಕೃಷ್ಣ ಭಟ್‌ ಚಾರಿಟೇಬಲ್‌ ಟ್ರಸ್ಟ್‌ ನಿಂದ ಪ್ರಶಸ್ತಿ ಪ್ರದಾನ ಸಮಾರಂಭ

Update: 2023-10-29 15:42 GMT

ಸುರತ್ಕಲ್‌, ಅ.29: ಶ್ರೇಣಿ ಗೋಪಾಲ ಕೃಷ್ಣ ಭಟ್‌ ಚಾರಿಟೇಬಲ್‌ ಟ್ರಸ್ಟ್‌ ನಿಂದ ಪ್ರತೀ ವರ್ಷ ಕೊಡಮಾಡುವ ಶ್ರೇಣಿ ಪ್ರಶಸ್ತಿ ಪ್ರದಾನ ಸಮಾರಂಭವು ಸುರತ್ಕಲ್‌ ಗೋವಿಂದದಾಸ ಕಾಲೇಜಿನ ಸಭಾ ಭವನದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ವೇ.ಮೂ. ವಾದಿರಾಜ ಉಪಾದ್ಯಾಯ ಅವರು, ನಿಷ್ಕಲ್ಮಶ ಮನಸ್ಸಿ ನಿಂದ ಯಾವುದೇ ಕೃಯ ಮಾಡಿದರೂ ಅದರ ಪ್ರತಿಫಲ ಮತ್ತಷ್ಟು ಉತ್ತಮವಾಗಿಯೇ ಇರುತ್ತದೆ. ಅದಕ್ಕೆ ಶ್ರೇಣಿ ಗೋಪಾಲ ಕೃಷ್ಣ ಭಟ್‌ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವೇ ಸಾಕ್ಷಿ ಎಂದು ನುಡಿದರು.

ಇದೇ ಸಂದರ್ಭ ಯಕ್ಷಗಾನದಲ್ಲಿ ಅವಿರತವಾಗಿ ಶ್ರಮಿಸಿದ ಕಲಾವಿದ ಕೆ. ಗೋವಿಂದ ಭಟ್‌ ಸೂರಿಕುಮೇರು ಅವರಿಗೆ ಈ ಬಾರಿಯ ಶ್ರೇಣಿ ಪ್ರಶಸ್ತಿಯನ್ನು ವೇದಿಕೆಯಲ್ಲಿದ್ದ ಗಣ್ಯರು ಪ್ರದಾನ ಮಾಡಿ ಗೌರವಿಸಿದರು.

ಇದೇ ವೇಳೆ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದ ಯಕ್ಷಗಾನ ಕಲಾವಿದೆ ಸುಮಂಗಳಾ ರತ್ನಾಕರ, ಕೆ. ಗೋವಿಂದ ಭಟ್‌ ಸೂರಿಕುಮೇರು ಅವರು ಯಕ್ಷಗಾನದಲ್ಲಿ ಯಾವುದೇ ಪಾತ್ರವನ್ನೂ ನೀಡಿದರೂ ಪಾತ್ರಕ್ಕೆ ಜೀವತುಂಬುತ್ತಿದ್ದರು. ಅವರು ಕಲಾವಿದ ಮಾತ್ರವಲ್ಲದೆ, ಯಕ್ಷಗಾನ ಕಥಾನಕವನ್ನು ನಾಡಿಗೆ ಪರಿಚಯಿದ್ದಾರೆ. ಅವರಿಗೆ ಸರ್ಕಾರ ಈ ಬಾರಿಯ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭ ಟ್ರಸ್‌ ನ ವತಿಯಿಂದ ಆಯೋಜಿಸಲಾಗಿದ್ದ ಮುಖ ವರ್ಣಿಕೆ ಮತ್ತು ಪೌರಾಣಿಕ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭ ಟ್ರಸ್ಟ್‌ ನ ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿದರು. ಈ ವೇಳೆ ಭುವನಾಭಿರಾಮ ಉಡುಪ ಕಿನ್ನಿಗೋಳಿ, ಗೋಂವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪದರೊ. ಕೃಷ್ಣ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News