ಪ್ರೋತ್ಸಾಹದಿಂದ ಮಾತ್ರ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ; ರಫೀಕ್ ಮಾಸ್ಟರ್

Update: 2023-11-16 06:25 GMT

ಬೆಳ್ತಂಗಡಿ: ವಿದ್ಯಾರ್ಥಿ ಎಂದಲ್ಲ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಅಂತರ್ಮುಖವಾದ ವ್ಯಕ್ತಿತ್ವ ಮತ್ತು ಪ್ರತಿಭೆ ಇರುತ್ತದೆ. ಅದರ ವಿಕಾಸಕ್ಕೆ ಅವಕಾಶ ಮತ್ತು ಪ್ರೋತ್ಸಾಹ ಬಹಳ ಅಗತ್ಯ ಎಂದು ಖ್ಯಾತ ವ್ಯಕ್ತಿತ್ವ ತರಬೇತುದಾರ ರಫೀಕ್ ಮಾಸ್ಟರ್ ಹೇಳಿದರು.

ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್  ಹಾಗೂ  ದರ್ಗಾ ಶರೀಫ್  ಇದರ  ಅಧೀನದ ವಿದ್ಯಾ ಸಂಸ್ಥೆಗಳಾದ "ರಾಹ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್", ರಹ್ಮಾನಿಯಾ ಪ್ರೌಢಶಾಲೆ, ಪಿಯುಸಿ ಮತ್ತು ಶರೀಅತ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿಶೇಷ ತರಬೇತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ನ.15 ರಂದು ಕಾಜೂರು ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಯು. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಹೈಸ್ಕೂಲ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಕಾಡೆಮಿಕ್ ಡೈರೆಕ್ಟರ್ ಕೆ ಎಂ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಿದರು.

2022-23 ನೇ ಸಾಲಿನಲ್ಲಿ ಸಂಸ್ಥೆಯಲ್ಲಿ ಅತ್ಯಧಿಕ ಅಂಕ ಪಡೆದ ನಿಶಾ ಹಾಗೂ ಮುಹಮ್ಮದ್ ಸುಹೈಬ್, ಪಿಯುಸಿಯಲ್ಲಿ ಖತೀಜಾ ಬರೀರಾ ಹಾಗೂ ಫೌಝಿಯಾ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 


ಈ ಕಾರ್ಯಕ್ರಮದಲ್ಲಿ ದರ್ಗಾ ಸಮಿತಿ ಉಪಾಧ್ಯಕ್ಷ ಬದ್ರುದ್ದೀನ್, ಶಿಕ್ಷಣ ಸಂಸ್ಥೆಯ ಚೇರ್ಮೆನ್, ದರ್ಗಾ ಪ್ರದಾನ ಕಾರ್ಯದರ್ಶಿ  ಜೆ ಹೆಚ್ ಅಬೂಬಕ್ಕರ್ ಸಿದ್ದೀಕ್, ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳಾದ  ಆಸಿಫ್ ಜೆ.ಹೆಚ್, ಶರೀಫ್ ಹೈಟೆಕ್, ಮುಸ್ತಫಾ ಡಿ ಎಚ್, ನವಾಝ್  ಎನ್.ಎಂ ಮತ್ತು ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಂಶಾದ್.ಎ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. 


ಮದ್ರಸ ಮುಖ್ಯೋಪಾಧ್ಯಾಯ ಜಮಾಲ್ ಲತೀಫಿ ಮದ್ದಡ್ಕ ದುಆ ನೆರವೇರಿಸಿದರು. ಸಂಸ್ಥೆಯ ಅಧ್ಯಾಪಕ ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶರೀಅತ್ ಕಾಲೇಜು ಉಪ ಪ್ರಾಂಶುಪಾಲ ಅಬ್ದುರ್ರಹ್ಮಾನ್ ಸಅದಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News