ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Update: 2024-09-04 17:05 GMT

ಮಂಗಳೂರು: ಶಿಕ್ಷಕರ ದಿನಾಚರಣೆಯ ಪೂರ್ವಭಾವಿಯಾಗಿ ನಗರದ ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ (ಎಫ್‌ಎಂಸಿಒಎಎಚ್‌ಎಸ್) ಕರ್ನಾಟಕ ಅಲೈಡ್ ಹೆಲ್ತ್‌ಕೇರ್ ಪ್ರೊಫೆಶನಲ್ಸ್ ಅಸೋಸಿಯೇಶನ್ (ಕೆಎಎಚ್‌ಪಿಎ) ಸಹಯೋಗದಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ (ಎಎಚ್‌ಎಸ್) ಮತ್ತು ಫಿಸಿಯೋಥೆರಪಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸರಣಿ ಸ್ಪರ್ಧೆಗಳನ್ನು ಸೆ.3ರಂದು ದಶವಾರ್ಷಿಕ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿತ್ತು.

ಕೆಎಎಚ್‌ಪಿಎ ಅಧ್ಯಕ್ಷರಾದ ಡಾ. ರಾಜೇಶ್ ಶೆಣೈ ರವರು ಕೆಎಎಚ್‌ಪಿಎ ಬಗ್ಗೆ ಅವಲೋಕನವನ್ನು ಒದಗಿಸಿದರು ಮತ್ತು ದಿನದ ಕಾರ್ಯಕ್ರಮಗಳ ಒಳನೋಟಗಳನ್ನು ವಿವರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಯು.ಟಿ ಇಫ್ತಿಕಾರ್ ಫರೀದ್ ಅವರು ಪ್ರಶಸ್ತಿಗಳನ್ನು ವಿತರಿಸಿದರು.

ಪ್ರಶಸ್ತಿ ವಿತರಣೆಯ ನಂತರ ಸ್ಪರ್ಧೆಗಳ ತೀರ್ಪುಗಾರರನ್ನು ಎಫ್‌ಎಂಸಿಒಎಎಚ್‌ಎಸ್ ಮತ್ತು ಎಫ್‌ಎಂಸಿಒಪಿ ಯ ಆಡಳಿತಾಧಿಕಾರಿ ವಂ.ಫಾ.ಅಜಿತ್ ಬಿ. ಮೆನೆಜಸ್ ಗೌರವಿಸಿದರು. ತೀರ್ಪುಗಾರರಾಗಿ ಡಾ. ವಿಶ್ವಾಸ್, ಸೀಮಾ, ವಿಜಯ ಕೇಶವ್ ಭಟ್, ಡಾ. ಪ್ರವೀಣ್ ಜಾನ್ ಮತ್ತು ಡಾ. ದೀಪಾ ಸಹಕರಿಸಿದ್ದರು.

30 ವಷರ್ಗಳ ಕಾಲ ಸಮರ್ಪಿತ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಯೋಕೆಮಿಸ್ಟ್ರಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಕೆ. ಅವರನ್ನು ಸನ್ಮಾನಿಸಲಾಯಿತು. ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರೋನ್ ರಾಜು ಅವರು ಡಾ.ಅರುಣ್ ಕುಮಾರ್ ಸೇವೆಯ ವಿವರ ನೀಡಿದರು. ಡಾ.ಯು.ಟಿ ಇಫ್ತಿಕಾರ್ ಫರೀದ್ ಅವರನ್ನು ಅಭಿನಂದಿಸಲಾಯಿತು.

ಫಾದರ್ ಮುಲ್ಲರ್ ಚಾರಿಟೇಬಲ್ ಸಮೂಹ ಸಂಸ್ಥೆಗಳ ನಿರ್ದೇಶಕ ವಂ.ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಲೊ ಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ. ಯು.ಟಿ ಇಫ್ತಿಕಾರ್ ಮತ್ತು ಡಾ. ರಾಜೇಶ್ ಶೆಣೈ ಅವರೊಂದಿಗೆ ಸಂವಾದಾತ್ಮಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.

ಎಫ್‌ಎಂಸಿಒಎಎಚ್‌ಎಸ್ ನ ಪ್ರಾಂಶುಪಾಲ ಡಾ. ಹಿಲ್ಡಾ ಡಿಸೋಜಾ ಎಫ್‌ಎಂಸಿಒ ನ ಬಯೋಕೆಮೆಸ್ಟ್ರಿ ವಿಭಾಗದ ಸಹಾಯಕ ಪ್ರೊ. ಕ್ಲೋಡಿಯಾ ಜೋನಿ ಕಾರ್ಯಕ್ರಮ ನಿರೂಪಿಸಿದರು. ಎಂ.ವಿ.ಶೆಟ್ಟಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಪ್ರಾಂಶುಪಾಲ ಶ್ರೀಪ್ರಿಯಾ ರಾವ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News