ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತ್ರೀ-ಪಾಯಿಂಟ್ ಡಿಸಂಬರ್ಕೇಶನ್ ವ್ಯವಸ್ಥೆ ಅನಾವರಣ

Update: 2023-12-13 12:52 GMT

ಮಂಗಳೂರು: ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು ಇಂಡಿಗೋ ಸಹಯೋಗದೊಂದಿಗೆ ವಿಮಾನಯಾನ ಸಂಸ್ಥೆಯ ವಿಶಿಷ್ಟ ‘ತ್ರೀ-ಪಾಯಿಂಟ್ ಡಿಸಂಬರ್ಕೇಶನ್ ವ್ಯವಸ್ಥೆ’ಯನ್ನು ಇತ್ತೀಚೆಗೆ ಅನಾವರಣಗೊಳಿಸಿದೆ.

ಈ ವಿಧಾನವು ಪ್ರಯಾಣಿಕರ ಬೋರ್ಡಿಂಗ್ ಸೇತುವೆ (ಏರೋಬ್ರಿಡ್ಜ್) ಮತ್ತು ಮೂರು ರ್ಯಾಂಪ್ ಗಳ ಬದಲಿಗೆ ಎರಡು ರ್ಯಾಂಪ್ ಗಳನ್ನು ಬಳಸುವುದನ್ನು ಒಳಗೊಂಡಿದೆ.

ಇಂಡಿಗೊ ಈ ಹಿಂದೆ ಎರಡು ಮುಂಭಾಗ ಮತ್ತು ಒಂದು ಹಿಂಭಾಗ ರ್ಯಾಂಪ್ ಗಳನ್ನು ಬಳಸುತ್ತಿತ್ತು. ಜಾಗತಿಕವಾಗಿ ವಾಯುಯಾನ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯಾಗಿ, ಏರ್ಲೈನ್ ತನ್ನ 16ನೇ ವಾರ್ಷಿಕೋತ್ಸವದ ಅಂಗವಾಗಿ ಈ ವ್ಯವಸ್ಥೆಯನ್ನು ಪರಿಚಯಿಸಿತ್ತು.

ಜೂನ್ 14, 2023 ರಂದು ಇಂಡಿಗೊ ಮೊದಲ ಬಾರಿಗೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ಪಾಯಿಂಟ್ ಇಳಿಯುವಿಕೆಯನ್ನು ಯಶಸ್ವಿಯಾಗಿ ನಡೆಸಿತ್ತು. ವ್ಯತ್ಯಾಸವೆಂದರೆ ಆ ಸಂದರ್ಭದಲ್ಲಿ ವಿಮಾನಯಾನವು ಮೂರು ರ್ಯಾಂಪ್ ಗಳನ್ನು ಬಳಸಿತ್ತು. ಡಿಸೆಂಬರ್6 ರಂದು ಬೆಂಗಳೂರಿನಿಂದ 227 ಪ್ರಯಾಣಿಕರೊಂದಿಗೆ ಆಗಮಿಸಿದ 6ಇ 6162 ವಿಮಾನವು ಪ್ರಯಾಣಿಕರ ಬೋರ್ಡಿಂಗ್ ಬ್ರಿಡ್ಜ್10ರಲ್ಲಿ ನಿಂತಿತ್ತು. ಏರ್ಲೈನ್ ಗ್ರೌಂಡ್ ಸಿಬ್ಬಂದಿ ಎರಡು ರ್ಯಾಂಪ್ ಗಳನ್ನು ಜೋಡಿಸಿ ಪ್ರಯಾಣಿಕರನ್ನು ತ್ವರಿತವಾಗಿ ಇಳಿಸಲು ಅನುಕೂಲ ಮಾಡಿಕೊಟ್ಟರು ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News