ಉಡುಪಿ - ಕಾಸರಗೋಡು 400ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿವಾದ: ರೈತರಿಂದ ಪ್ರತಿಭಟನೆ

Update: 2023-10-10 17:21 GMT

ವಿಟ್ಲ: ಜಾಗ ಕಳೆದುಕೊಳ್ಳುವ ರೈತರ ಹಾಗೂ ನಾಗಕರೀಕರ ಸಭೆಯನ್ನು ಜಿಲ್ಲಾಡಳಿತ ನಡೆಸುವಂತೆ ಕಂಪನಿಗೆ ಸೂಚನೆ ಗಳನ್ನು ನಡೆಸಿದ್ದರೂ, ಇದನ್ನು ಮಾಡದ ಉಡುಪಿ - ಕಾಸರಗೋಡು 400ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಕಂಪನಿಗಳ ಸಿಬ್ಬಂದಿಗಳು ಯಂತ್ರಗಳ ಸಹಿತವಾಗಿ ಅಡ್ಯನಡ್ಕ ಕೊಲ್ಲಪದವು ಭಾಗಕ್ಕೆ ಆಗಮಿಸಿ ವಿದ್ಯುತ್ ಗೋಪುರ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.

ಕೊಲ್ಲಪದವು ಕೊಡುಂಜಡ್ಕದಲ್ಲಿ ರೈತರ ಕೃಷಿ ಭೂಮಿಯಲ್ಲಿ ವಿದ್ಯುತ್ ಗೋಪುರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಂಪನಿಯ ಅಧಿಕಾರಿಗಳು ಕೆಲವು ನಿವೃತ್ತ ಪೆÇಲೀಸ್ ಅಧಿಕಾರಿಗಳ ಜತೆಗೆ ಆಗಮಿಸಿದ್ದಾರೆ. ಗೋಪುರದ ಅಡಿಪಾಯ ಮಾಡುವ ನಿಟ್ಟಿನಲ್ಲಿ ಜೆಸಿಬಿ, ಮರ ಕಡಿಯುವವರು ಸೇರಿ ಹತ್ತರಿಂದ ಇಪ್ಪತ್ತು ಮಂದಿ ಕಾರ್ಮಿಕರ ಸಹಿತವಾಗಿ ಹಲವು ವಾಹನಗಳಲ್ಲಿ ಆಗಮಿಸಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅವರನ್ನು ಹಾಗೂ ವಾಹನಗಳನ್ನು ತಡೆಯುವ ಕಾರ್ಯವನ್ನು ಕೊಲ್ಲಪದವು ಜಂಕ್ಷನ್ ನಲ್ಲಿ ಮಾಡಿದ್ದಾರೆ. ಪುಣಚ ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಆಗಮಿಸಿ ಪಂಚಾಯಿತಿ ಕಾಮಗಾರಿ ಅನುಮತಿಯನ್ನು ನೀಡದಿದ್ದಾಗ ಕಾಮಗಾರಿಯನ್ನು ಹೇಗೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸ್ಥಳದಲ್ಲಿ ಜನ ಸೇರಿ ಸ್ವಲ್ಪ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬಂಟ್ವಾಳ ತಹಸೀಲ್ದಾರ್ ಬರುವ ಸೂಚನೆಯನ್ನು ಸ್ಥಳಕ್ಕಾಗಮಿಸಿದವರು ನೀಡಿದರು. ಯಾರು ಬಂದರೂ ಜಿಲ್ಲಾಡಳಿತ ರೈತರ ಸಭೆಯನ್ನು ನಡೆಸಿ ರೈತರಿಗೆ ಸಮರ್ಪಕ ಮಾಹಿತಿ ನೀಡಿ, ರೈತರ ಸಮಸ್ಯೆಯನ್ನು ದಾಖಲಿಸಿಕೊಳ್ಳದೇ ಹೋದಲ್ಲಿ ಕಾಮಗಾರಿಯನ್ನು ನಡೆಸಲು ಬಿಡುವು ದಿಲ್ಲ ಎಂದು ಸ್ಥಳದಲ್ಲಿ ಸೇರಿದ ಹೋರಾಟಗಾರರು ನೀಡಿದ್ದಾರೆ. 

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಅವರಿಗೆ ಹಾಗೂ 400ಕೆ.ವಿ. ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ವಿಟ್ಲದ ಪದಾಧಿಕಾರಿಗಳು ಮಾಹಿತಿ ಯನ್ನು ನೀಡುವ ಕಾರ್ಯವನ್ನು ಸ್ಥಳೀಯರು ಮಾಡಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಪಂಚಾಯಿತಿ ಸದಸ್ಯರು ಮಾಹಿತಿ ನೀಡಿದ್ದಾರೆ.

ಪ್ರಸರಣ ಮಾರ್ಗ ಖಾಸಗೀ ಕಂಪನಿಯ ವಿದ್ಯುತ್ ಮಾರಾಟ ಮಾಡಲು ಸಹಕಾರಿಯಾಗುವ ನಿಟ್ಟಿನಲ್ಲಿ ನಿರ್ಮಾಣವಾಗು ತ್ತಿದೆ. ಕಳೆದ ಮೂರು ವರ್ಷಗಳಿಂದ ಕಂಪನಿ ಸರ್ಕಾರದ ಕಾಮಗಾರಿ ಎಂದು ಹೇಳಿಕೊಳ್ಳುತ್ತಿದೆಯಾದರೂ, ವಾಸ್ತವದಲ್ಲಿ ಇದು ಖಾಸಗೀ ಮಾರ್ಗ ಎಂಬುದು ಜಿಲ್ಲಾಡಳಿತಕ್ಕೂ ತಿಳಿದಿದೆ. ಈ ಕಾರಣದಿಂದಲೇ ಜಿಲ್ಲಾಡಳಿತ ರೈತರ ಸಭೆಯನ್ನು ನಡೆಸದೆ ಕಂಪನಿಯವರನ್ನು ಮುಂದೆ ಹೋಗಿ ಕಾಮಗಾರಿ ನಡೆಸುವಂತೆ ತಿಳಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News