ಉಳ್ಳಾಲ: ಲೋಕಾಯುಕ್ತ ಆಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ

Update: 2023-11-08 10:11 GMT

ಉಳ್ಳಾಲ, ನ.8: ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಉಳ್ಳಾಲ ನಗರಸಭೆಯಲ್ಲಿ ಜನನ-ಮರಣ ಪ್ರಮಾಣ ಪತ್ರ, ಉದ್ದಿಮೆ, ಕಟ್ಟಡ ಪರವಾನಿಗೆ ನೀಡುವಲ್ಲಿ ವಿಳಂಬ ಆಗುತ್ತಿದೆನಗರಸಭೆಗೆ ಖಾಯಂ ಪೌರಾಯುಕ್ತರನ್ನು ನೇಮಿಸಬೇಕು ಇತ್ಯಾದಿ ಬೇಡಿಕೆ, ಸಮಸ್ಯೆಗಳ ಅಹವಾಲನ್ನು ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ಸದಸ್ಯರು, ಕೌನ್ಸಿಲರ್ ಗಳು ಅಧಿಕಾರಿಗಳ ಮುಂದಿಟ್ಟರು. ಅವುಗಳಿಗೆ ಉತ್ತರಿಸಿದ ಲೋಕಾಯುಕ್ತ ಅಧಿಕಾರಿಗಳು, ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

 ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಮನವಿ ಅರ್ಪಿಸಿತು. ಯುಜಿಡಿ ಸಮಸ್ಯೆ ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಳ್ಳಾಲ ಮುಸ್ಲಿಮ್ ಒಕ್ಕೂಟದ ಸದಸ್ಯರು ಮನವಿ ಅರ್ಪಿಸಿದರು.

ಅಹವಾಲು ಸ್ವೀಕರಿಸಿ ಪರಿಶೀಲಿಸಿದ ಬಳಿಕ ನಗರಸಭೆ ಸಿಬ್ಬಂದಿಯೊಂದಿಗೆ ಮಾತನಾಡಿದ ಲೋಕಾಯುಕ್ತ ಅಧಿಕಾರಿಗಳು, ಭ್ರಷ್ಟಾಚಾರದ ದೂರುಗಳು ಬರಬಾರದು, ಬಗ್ಗೆ ಜಾಗೃತಿ ವಹಿಸಬೇಕು. ಈಗಾಗಲೇ ಕೆಲವರು ಬಾಕಿ ಉಳಿದ ರಸ್ತೆ, ಚರಂಡಿ ಕಾಮಗಾರಿ, ಯುಜಿಡಿ ಸಮಸ್ಯೆ ಬಗೆ ದೂರು ನೀಡಿದ್ದಾರೆ. ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಸೂಚಿಸಿದರು.

 ಸಭೆಯಲ್ಲಿ ಒಟ್ಟು 20 ಅಹವಾಲುಗಳನ್ನು ಸಲ್ಲಿಸಿದ್ದು, ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇನ್ ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್, ಸಿಬ್ಬಂದಿಯಾದ ಮಹೇಶ್, ರಾಜಪ್ಪ, ವಿನಾಯಕ, ಗಂಗಣ್ಣ, ರುದ್ರೇಗೌಡ, ವಿವೇಕ್, ಪಂಪಣ್ಣನಗರಸಭೆ ಸಿಬ್ಬಂದಿ, ನಗರಸಭೆ ಕೌನ್ಸಿಲರ್ ಗಳು, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತಡಿ, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ ಮಯ್ಯ, ಉಳ್ಳಾಲ ಮುಸ್ಲಿಮ್ ಒಕ್ಕೂಟ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಉಳ್ಳಾಲ ನಾಗರಿಕ ವೇದಿಕೆ ಸಂಘಟನೆ ಸದಸ್ಯರುಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News