ಮಂಗಳೂರು: ಬ್ಯಾರೀಸ್ ಕಾಲೇಜಿನಲ್ಲಿ ಇಂಜಿನಿಯರ್ಸ್ ಡೇ ಆಚರಣೆ

Update: 2024-09-19 12:26 GMT

ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಮಾಜಕ್ಕೆ ಇಂಜಿನಿಯರ್‌ಗಳ ಗಮನಾರ್ಹ ಕೊಡುಗೆಯನ್ನು ನೆನಪಿಸುವ ದೃಷ್ಟಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮ ವನ್ನು ಡಾ. ಅಬ್ದುಲ್ಲಾ ಗುಬ್ಬಿ, ಪ್ರೊ. ನಿಖಿತಾ ಸಿ ಮತ್ತು ಇಸಿಇ ವಿಭಾಗದ ಪ್ರೊ. ಸುಜಯ್ ಅವರು ಸಂಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ IPCS ಗ್ಲೋಬಲ್ ನ ಸರುನ್ ಪಿ ಭಾಗವಹಿಸಿ, ಮಾತನಾಡಿದ್ದಾರೆ.

ಇಂಜಿನಿಯರ್ಸ್ ಡೇ ಭಾಗವಾಗಿ ಕಾರ್ಯಕ್ರಮದಲ್ಲಿ ಭಾಷಣ ಸ್ಪರ್ಧೆ, ಪ್ರಾಜೆಕ್ಟ್ ಪ್ರದರ್ಶನ ಮತ್ತು ರಸಪ್ರಶ್ನೆಗಳಂತಹ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.










 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News