ಝೀಕ್ಯೂ ರಾಷ್ಟ್ರ ಮಟ್ಟದ ಕುರ್‌ಆನ್ ಸ್ಪರ್ಧೆ ಮಂಜನಾಡಿ ಅಲ್ ಮದೀನಾದ ಫಾತಿಮಾ ಝುಲೈಖಾ ದ್ವಿತೀಯ
ಕೋಝಿಕ್ಕೋಡ್: ಮರ್ಕಝ್ ಝೀಕ್ಯೂ ಇಸ್ಲಾಮಿಕ್ ಪ್ರಿ ಸ್ಕೂಲ್ ನೆಟ್ ವರ್ಕ್ ವಿವಿಧ ರಾಜ್ಯದಲ್ಲಿರುವ ತನ್ನ ಅಧೀನದ ಝೀಕ್ಯೂ ಪ್ರಿ ಸ್ಕೂಲ್ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ನಡೆಸಿದ ರಾಷ್ಟ್ರಮಟ್ಟದ ಕುರ್‌ಆನ್ ಸ್ಪರ್ಧೆ ತರ್ನಿಮ್-25 ಇದರ ಕುರ್‌ಆನ್ ಹಿಫ್ಲ್ ವಿಭಾಗದ ಸ್ಪರ್ಧೆಯಲ್ಲಿ ಮಂಜನಾಡಿ ಅಲ್ ಮದೀನ ಝೀಕ್ಯೂ ವಿದ್ಯಾರ್ಥಿನಿ ಫಾತಿಮಾ ಝುಲೈಖಾ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
140 ಝೀಕ್ಯೂ ಸಂಸ್ಥೆಗಳ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳಲ್ಲಿ ವಿವಿಧ ಝೋನ್‌ಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾನಾ ಹಂತಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಂತಿಮ ಸುತ್ತಿನ ಸ್ಪರ್ಧೆಯು ಕ್ಯಾಲಿಕಟ್ ಮರ್ಕಝಿನಲ್ಲಿ ಮಾ.22ರಂದು ನಡೆಯಿತು. ವಿದ್ವಾಂಸ ಸಲೀಂ ಸಅದಿ ಹೊನ್ನಾವರ ಅವರ ಪುತ್ರಿಯಾಗಿರುವ ಫಾತಿಮಾ ಝುಲೈಖಾ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಕುರ್‌ಆನಿನ ಒಂದು ಕಾಂಡದ ಕಂಠಪಾಠ ಪೂರ್ಣಗೊಳಿಸಿದ ಸಾಧನೆಯನ್ನೂ ಕೂಡ ಮಾಡಿದ್ದಾರೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಾಮಾ ಶೈಖುನಾ ಎ.ಪಿ. ಅಬೂಬಕರ್ ಮುಸ್ಲಿಯಾರ್‌ರಿಂದ ವಿದ್ಯಾರ್ಥಿನಿ ಫಾತಿಮಾ ಝುಲೈಖಾ ಬಹುಮಾನ ಸ್ವೀಕರಿಸಿದರು.