ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ ಆರೋಪಿಸಿ ಅಪಹಾಸ್ಯಕ್ಕೆ ಗುರಿಯಾದ 10ರ ಹರೆಯದ ಸ್ವಘೋಷಿತ ವಾಗ್ಮಿ ಅಭಿನವ್ ಅರೋರಾ

Update: 2024-10-29 09:23 GMT

Photo | Instagram

ಮಥುರಾ : ಸ್ವಯಂ ಘೋಷಿತ ಆಧ್ಯಾತ್ಮಿಕ ಪ್ರಬೋಧಕನಾಗಿರುವ 10ರ ಹರೆಯದ ಬಾಲಕ ಅಭಿನವ್ ಅರೋರಾ ಅವರ ಕುಟುಂಬ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆ ಹಾಕಿದೆ ಎಂದು ಹೇಳಿಕೊಂಡಿದ್ದು, ಈ ಸುದ್ದಿ ಆನ್ ಲೈನ್ ನಲ್ಲಿ ಅಪಹಾಸ್ಯ ಮತ್ತು ಟೀಕೆಗೆ ಕಾರಣವಾಗಿದೆ.

ಈ ಕುರಿತ ಸುದ್ದಿ ಪ್ರಕಟಿಸಿ ಸ್ವಯಂ ಘೋಷಿತ ಆಧ್ಯಾತ್ಮಿಕ ವಾಗ್ಮಿ ಮತ್ತು ಅವರ ಕುಟುಂಬದ ಆರೋಪಗಳಿಗೆ ಅನಗತ್ಯ ಪ್ರಚಾರವನ್ನು ನೀಡಿದ್ದಾರೆಂದು NDTVಯನ್ನು ಕೂಡ ಜನರು ಟೀಕಿಸಿದ್ದಾರೆ.

ಎಕ್ಸ್ ಬಳಕೆದಾರನೋರ್ವ ʼ150 ಕೋಟಿ ಜನಸಂಖ್ಯೆಯಲ್ಲಿ 100 ಕೋಟಿ ಜನರಿಗೆ ಬಿಷ್ಣೋಯಿ ಬೆದರಿಕೆ ಹಾಕ್ತಾನೆʼ ಎಂದು ಹೇಳಿದರೆ, ಇನ್ನೊಬ್ಬರು ʼಅವನು ಶಾಲೆಗೆ ಹೋಗದ ಕಾರಣ ಬೆದರಿಕೆ ಹಾಕಿದ್ದಾ?ʼ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಸಹಾನುಭೂತಿ ಗಿಟ್ಟಿಸಿಕೊಳ್ಳಲು ಮತ್ತು ಪ್ರಚಾರವನ್ನು ಪಡೆಯಲು ಮಾಡಿದ ಶುದ್ಧ ಪ್ರಚಾರದ ತಂತ್ರ ಎಂದು ವ್ಯಕ್ತಿಯೋರ್ವರು ಟೀಕಿಸಿದರೆ, ಇನ್ನೋರ್ವರು ಲಾರೆನ್ಸ್ ಬಿಷ್ಣೋಯಿ ಅವರೇ, ದಯವಿಟ್ಟು ನೀವು ನನಗೂ ಬೆದರಿಕೆ ಹಾಕಬಹುದೇ? ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

NDTV ಅಭಿನವ್ ಅರೋರಾ ಅವರನ್ನು 'ವಾಗ್ಮಿ' ಎಂದು ಕರೆಯುತ್ತಿದೆ, ಪ್ರಚಾರದ ಸರ್ಕಸ್ ಗೆ ಕೊಡುಗೆ ನೀಡುತ್ತಿದೆ. ಪ್ರಚಾರಕ್ಕೆ ಬೇರೆ ದಾರಿ ಇರಲಿಲ್ಲವೇ? ಎಂದು ಇನ್ನೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಟೀಕಿಸಿದ್ದಾರೆ.

NDTVಯ ಈ ಸುದ್ದಿಯು ಪ್ರಚಾರ ನೀಡುವ ದೃಷ್ಟಿಯಿಂದ ಕೂಡಿದೆ. ಮೋದಿಜೀಯವರ ಅಮೃತ ಕಾಲದಲ್ಲಿ, ಸನಾತನಿಗಳು ಕೂಡ ಸುರಕ್ಷಿತವಾಗಿಲ್ಲ, ಪ್ರಚಾರಕ್ಕೆ ಬೇರೆ ದಾರಿ ಇರಲಿಲ್ಲವೇ? ಎಂಬಂತಹ ಕಾಮೆಂಟ್ ಗಳನ್ನು ಕೆಲವರು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News