ಪ್ರಿಯಾಂಕಾ ಗಾಂಧಿ ಗೆಲುವು | ವಯನಾಡ್‌ ರವಾನಿಸಿದ ಸಂದೇಶವೇನು?

Update: 2024-11-24 14:15 GMT

ಪ್ರಿಯಾಂಕಾ ಗಾಂಧಿ | Photo: X/@priyankagandhi

ಹೊಸದಿಲ್ಲಿ : ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಗೆಲುವು ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ಪಕ್ಷಗಳಿಗೆ ಹಲವಾರು ಸಂದೇಶಗಳನ್ನು ರವಾನಿಸಿದೆ.

ನಾಲ್ಕು ಲಕ್ಷ ಮತಗಳಿಗೂ ಅಧಿಕ ಅಂತರದ ಗೆಲುವು ಪ್ರಿಯಾಂಕಾ ಓರ್ವ ಸಮರ್ಥ ನಾಯಕಿ ಎನ್ನುವುದನ್ನು ಸಾಬೀತುಗೊಳಿಸಿದೆ. ಇನ್ನು ಮುಂದೆ ಅವರು ತಾಯಿ ಸೋನಿಯಾ ಗಾಂಧಿ ಅಥವಾ ಸೋದರ ರಾಹುಲ್ ಗಾಂಧಿವರೊಂದಿಗಿನ ಫೋಟೊಗಳಲ್ಲಿ ‘ಎಕ್ಟ್ರಾ’ ಆಗಿರುವುದಿಲ್ಲ. ಅವರು ತನ್ನದೇ ಆದ ನ್ಯಾಯಸಮ್ಮತ ಸ್ಥಾನವನ್ನು ರೂಪಿಸಿಕೊಂಡಿದ್ದಾರೆ. ವರ್ಚಸ್ವಿ ನಾಯಕತ್ವಕ್ಕಾಗಿ ಪಕ್ಷದ 40 ವರ್ಷಗಳ ಹುಡುಕಾಟ ಕೊನೆಗೂ ಅಂತ್ಯಗೊಂಡಿದೆ ಎಂದು ಕಾಂಗ್ರೆಸ್ ನ ಕೆಲವು ನಾಯಕರು ಭಾವಿಸಿರಲೂಬಹುದು.

ಮಹಾರಾಷ್ಟ್ರದಲ್ಲಿ ಅದ್ಭುತ ಗೆಲುವಿನ ಸಂಭ್ರಮಾಚರಣೆಯ ಗುಂಗಿನಲ್ಲಿರುವ ಬಿಜೆಪಿಗರು ವಯನಾಡಿನಲ್ಲಿ ಪ್ರಿಯಾಂಕಾರ ಗೆಲುವು ನೆಹರು-ಗಾಂಧಿ ಕುಟುಂಬದ ವಿರುದ್ಧ ನರೇಂದ್ರ ಮೋದಿಯವರ ಎರಡು ದಶಕಗಳ ಯುದ್ಧದ ಸೋಲಿನ ಪ್ರತೀಕವಾಗಿದೆ ಎನ್ನುವುದನ್ನು ಪರಿಗಣಿಸಬೇಕಿದೆ.

ನ.25ರಂದು ಚಳಿಗಾಲದ ಅಧಿವೇಶನಕ್ಕಾಗಿ ಸಂಸತ್ತು ಪುನಃ ಸಮಾವೇಶಗೊಂಡಾಗ ಒಂದೇ ಕುಟುಂಬದ ಮೂವರು ಸದಸ್ಯರು ಅಲ್ಲಿರಲಿದ್ದಾರೆ. ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಹಾಗೂ ಲೋಕಸಭೆಯಲ್ಲಿ ರಾಹುಲ್ ಮತ್ತು ಪ್ರಿಯಾಂಕಾ, ಬಹುಶಃ ಸಂಸತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದೇ ಕುಟುಂಬದ ಮೂವರು ಉಪಸ್ಥಿತರಿರಲಿದ್ದಾರೆ. ಅದೂ ಮೋದಿಯವರ ನಿಗಾದಲ್ಲಿ.

ಮೋದಿ ಎರಡು ದಶಕಗಳಿಗೂ ಹೆಚ್ಚಿನ ಕಾಲ ಗಾಂಧಿ ಕುಟುಂಬದ ವಿರುದ್ಧ ಅಪಾರ ಪ್ರಮಾಣದಲ್ಲಿ ತನ್ನ ವಾಕ್ಚಾತುರ್ಯವನ್ನು ಬಳಸಿದ್ದಾರೆ. ಅವರು ಮತ್ತು ಅವರ ಪಕ್ಷವು ರಾಜಕೀಯ ಜೀವನದಲ್ಲಿ ‘ಕುಟುಂಬ’ ಅಥವಾ‘ರಾಜವಂಶ’ವನ್ನು ಖಂಡಿಸುವುದರಲ್ಲಿಯೇ ತೊಡಗಿಕೊಂಡಿದ್ದರಿಂದ ಮೋದಿ ಈ ಹೋರಾಟದಲ್ಲಿ ಸೋತಿದ್ದಾರೆ.

ಆಶಾದಾಯಕವಾಗಿ ವಯನಾಡ್‌ ಬಳಿಕ ಇನ್ನು ಮುಂದೆ ಕುಟುಂಬ ಆಡಳಿತವನ್ನು ಪ್ರತಿಭಟಿಸುವಂತೆ ದೇಶವನ್ನು ಕೇಳಿಕೊಳ್ಳಲಾಗುವುದಿಲ್ಲ. ಲೋಕಸಭೆಯಲ್ಲಿ ಪ್ರಿಯಾಂಕಾರ ಕೇವಲ ಉಪಸ್ಥಿತಿಯು ಆಡಳಿತ ಪಕ್ಷದತ್ತ ಕಿಡಿಗಳು ಏಳಲು ಕಾರಣವಾಗಲಿದೆ. ಇದಕ್ಕೆ ಬಿಜೆಪಿ ಸದಸ್ಯರು ಸಜ್ಜಾಗಿರಬೇಕಿದೆ. ಪ್ರಿಯಾಂಕಾ ಅತ್ಯಂತ ‘ರಾಜವಂಶ’ ಮೂಲಭೂತವಾದಿಯಾಗಿದ್ದು, ಎಂದೂ ಕ್ಷಮೆ ಕೋರದ ಬಿಂದಾಸ್ ಇಂದಿರಾ ಗಾಂಧಿಯವರ ಮೊಮ್ಮಗಳಾಗಿದ್ದಾರೆ. ಅವರಿಗೆ ಮೋದಿ ಅಥವಾ ಆಡಳಿತಾರೂಢ ಪಕ್ಷದ ಯಾವುದೇ ಸದಸ್ಯರ ಕುರಿತು ಕಿಂಚಿತ್ತೂ ಭಯವಿಲ್ಲ. ಬಿಜೆಪಿಯ ಸಂಸದೀಯ ವ್ಯವಸ್ಥಾಪಕರು ಪ್ರಿಯಾಂಕಾರ ಮೇಲೆ ನಿಗಾ ಇರಿಸುವುದು ಅಗತ್ಯವಾಗಲಿದೆ.

ವಯನಾಡ್‌ ಬಳಿಕ ಕಾಂಗ್ರೆಸನ್ನು ನಿರೀಕ್ಷಿತ ಭವಿಷ್ಯಕ್ಕಾಗಿ ತನ್ನ ನಾಯಕತ್ವ ಸಮಸ್ಯೆಯನ್ನು ಬಗೆಹರಿಸಿಕೊಂಡ ಏಕೈಕ ಪಕ್ಷವಾಗಿದೆ ಎಂದು ಹೇಳಬಹುದು. ಒಳ್ಳೆಯದ್ದಕ್ಕಾಗಲಿ ಅಥವಾ ಕೆಟ್ಟದ್ದಕ್ಕಾಗಲಿ, ಸುಸಂಬಂದ್ಧತೆ ಮತ್ತು ಸ್ಥಿರತೆಯನ್ನು ಒದಗಿಸಲು ಮುಂದಿನ ಎರಡು ದಶಕಗಳವರೆಗೆ ಗಾಂಧಿಗಳಿರಲಿದ್ದಾರೆ, ಹೆಚ್ಚಿನ ಪಕ್ಷಗಳಿಗೆ ಇಂತಹ ಅವಕಾಶವಿಲ್ಲ ಎಂಬುದನ್ನು ಗಮನಿಸಬೇಕಿದೆ.

ಬಿಜೆಪಿ ವಯಸ್ಸಾಗಿರುವ ಮತ್ತು ದಣಿದಿರುವ ಮೋದಿಯವರೊಂದಿಗೆ ಸಿಕ್ಕಿಹಾಕಿಕೊಂಡಿದೆ. ಟಿಎಂಸಿ, ಸಿಪಿಎಂ, ಬಿಎಸ್ಪಿ, ಎನ್ಸಿಪಿ ಮತ್ತು ಅಕಾಲಿ ದಳ ನಾಯಕತ್ವದತ್ತ ಅನಿಶ್ಚಿತತೆಯಿಂದ ನೋಡುತ್ತಿವೆ. ಸಮಾಜವಾದಿ ಪಾರ್ಟಿ ಮಾತ್ರ ಅಖಿಲೇಶ್ ಯಾದವ್ ರಲ್ಲಿ ಯುವ ಮತ್ತು ವಿವಾದಾತೀತ ನಾಯಕತ್ವವನ್ನು ಹೊಂದಿದೆ. ಇದು ಕಾಂಗ್ರೆಸ್ ಪಕ್ಷವು ತನ್ನ ಪ್ರತಿಪಕ್ಷ ನಾಯಕತ್ವವನ್ನು ನ್ಯಾಯಸಮ್ಮತವಾಗಿ ಸಮರ್ಥಿಸಿಕೊಳ್ಳುವಂತೆ ಮಾಡಲಿದೆ.

 ಸೌಜನ್ಯ : thewire.in

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News