ಹೂಡಿಕೆದಾರರಿಗೆ 82.5 ಲಕ್ಷ ರೂ. ವಂಚನೆ ಆರೋಪ | ಮೃತ ವ್ಯಕ್ತಿಯ ವಿರುದ್ಧ ಕೇಸ್ ದಾಖಲು
ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ಹೂಡಿಕೆದಾರರಿಗೆ 82.5 ಲಕ್ಷ ರೂ. ವಂಚಿಸಿದ ಆರೋಪದಲ್ಲಿ ಮೃತ ವ್ಯಕ್ತಿಯೊಬ್ಬರ ವಿರುದ್ಧ ಮಹಾರಾಷ್ಟ್ರದ ಥಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಂಚನೆಗೊಳಗಾದ ಹೂಡಿಕೆದಾರರು ನಗರ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಓಡಬ್ಲ್ಯು)ಕ್ಕೆ 2024ರ ಡಿಸೆಂಬರ್ 4ರಲ್ಲಿ ದೂರು ನೀಡಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಆರೋಪಿಯು ಸಾವನ್ನಪ್ಪಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 2019 ಹಾಗೂ 2024ರ ಡಿಸೆಂಬರ್ ಮಧ್ಯೆ ನಡೆದಿತ್ತೆನ್ನಲಾದ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ನೌಪಾಡ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದರು.
ಆಗಸ್ಟ್ 2019 ಹಾಗೂ 2024ರ ಅವಧಿಯಲ್ಲಿ ಆರೋಪಿಯು 9 ಮಂದಿ ಹೂಡಿಕೆದಾರರಿಗೆ 82.5 ಲಕ್ಷ ರೂ. ವಂಚಿಸಿದ್ದನೆನ್ನಲಾಗಿದೆ.
ಭಾರೀ ಲಾಭದ ಆಮಿಷವೊಡ್ಡಿ ವಿವಿಧ ಸ್ಕೀಮುಗಳಿಗೆ ಸಂತ್ರಸ್ತರಿಂದ ಹೂಡಿಕೆ ಮಾಡಿಸಿದ್ದನೆಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಅವರಿಂದ ಹಣವನ್ನು ಸಂಗ್ರಹಿಸಿದ್ದ ಆರೋಪಿಯು, ಆ ಮೊತ್ತವನ್ನಾಗಲಿ ಅಥವಾ ಹೂಡಿಕೆಯ ಲಾಭಾಂಶವನ್ನಾಗಲಿ ಪಾವತಿಸಿಲ್ಲವೆಂದು ಆರೋಪಿಸಲಾಗಿದೆ.