ಗುಜರಾತ್: ಎಚ್‌ಎಂಪಿವಿ ಪ್ರಕರಣಗಳು 3ಕ್ಕೆ ಏರಿಕೆ

Update: 2025-01-10 16:18 GMT

ಸಾಂದರ್ಭಿಕ ಚಿತ್ರ

ಹಿಮ್ಮತ್‌ನಗರ : ಗುಜರಾತಿನ ಸಬರಕಾಂತಾ ಜಿಲ್ಲೆಯ ಎಂಟರ ಹರೆಯದ ಬಾಲಕ ಎಚ್‌ಎಂಪಿವಿ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಈ ವೈರಸ್ ಕಾಯಿಲೆ ಪ್ರಕರಣಗಳ ಸಂಖ್ಯೆ ಮೂರಕ್ಕೇರಿದೆ.

ಬಾಲಕ ಪ್ರಾಂತಿಜ್ ತಾಲೂಕಿನ ಕೃಷಿ ಕಾರ್ಮಿಕ ದಂಪತಿಯ ಪುತ್ರನಾಗಿದ್ದು, ಹಿಮ್ಮತ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ದೇಹಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ಇದು ಶಂಕಿತ ಎಚ್‌ಎಂಪಿವಿ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಸರಕಾರಿ ಪ್ರಯೋಗಾಲಯವು ಬಾಲಕ ಸೋಂಕಿಗೆ ತುತ್ತಾಗಿರುವುದನ್ನು ಶುಕ್ರವಾರ ದೃಢಪಡಿಸಿದೆ.

ಗುಜರಾತಿನಲ್ಲಿ ಜ.6ರಂದು ಎರಡು ತಿಂಗಳ ಗಂಡುಮಗುವಿನಲ್ಲಿ ಮತ್ತು ಗುರುವಾರ 80ರ ವೃದ್ಧರೋರ್ವರಲ್ಲಿ ಎಚ್‌ಎಂಪಿವಿ ಸೋಂಕು ದೃಢಪಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News