ಮಹಿಳಾ ಮೀಸಲಾತಿ ಕಾಯ್ದೆಗೆ ಸಂಬಂಧಿಸಿದ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Update: 2025-01-10 15:21 GMT

ಸುಪ್ರೀಂ ಕೋರ್ಟ್ | PTI 

ಹೊಸದಿಲ್ಲಿ : ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ 2023 ನಾರಿ ಶಕ್ತಿ ವಂದನಾ ಕಾಯ್ದೆಯ ಕ್ಷೇತ್ರ ಮರುವಿಂಗಡಣೆ ವಿಧಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಜಯಾ ಠಾಕೂರ್ ಮತ್ತು ನ್ಯಾಶನಲ್ ಫೆಡರೇಶನ್ ಆಫ್ ಇಂಡಿಯನ್ ವಿಮೆನ್ (ಎನ್‌ಎಫ್‌ಐಡಬ್ಲ್ಯು) ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಿರುವ ಅರ್ಜಿಗಳನ್ನು ಪುರಸ್ಕರಿಸಲು ನ್ಯಾಯಮೂರ್ತಿಗಳಾದ ಬೇಲಾ ಎಮ್. ತ್ರಿವೇದಿ ಮತ್ತು ಪಿ.ಬಿ. ವರಾಳೆ ಅವರನ್ನು ಒಳಗೊಂಡ ನ್ಯಾಯಪೀಠವು ನಿರಾಕರಿಸಿತು.

ಈಗಾಗಲೇ ಕಾಯ್ದೆಯಾಗಿರುವ ಮಸೂದೆಯನ್ನು ಜಯಾ ಠಾಕೂರ್ ಪ್ರಶ್ನಿಸಿದ್ದರೆ, ಎನ್‌ಎಫ್‌ಐಡಬ್ಲ್ಯು ಈ ಕಾನೂನಿನ ಕ್ಷೇತ್ರ ಮರುವಿಂಗಡಣೆ ವಿಧಿಯನ್ನು ಪ್ರಶ್ನಿಸಿದೆ ಎಂಬುದರತ್ತ ನ್ಯಾಯಪೀಠ ಬೆಟ್ಟು ಮಾಡಿತು. ನ್ಯಾಯಾಲಯವು ಠಾಕೂರ್‌ ರ ಅರ್ಜಿಯನ್ನು ‘‘ಫಲಪ್ರದವಲ್ಲ’’ ಎಂಬ ಕಾರಣ ನೀಡಿ ವಜಾಗೊಳಿಸಿತು. ಅದೇ ವೇಳೆ, ಎನ್‌ಎಫ್‌ಐಡಬ್ಲ್ಯು ಪರಿಹಾರಕ್ಕೆ ಹೈಕೋರ್ಟ್ ಅಥವಾ ಇತರ ಯಾವುದೇ ಸೂಕ್ತ ವೇದಿಕೆಗೆ ಹೋಗಬಹುದಾಗಿದೆ ಎಂದು ಹೇಳಿದ ನ್ಯಾಯಪೀಠ ಅದರ ಅರ್ಜಿಯನ್ನೂ ವಜಾಗೊಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News