ಗಾಂಜಾದೊಂದಿಗೆ ಬಂಧಿಸಲ್ಪಟ್ಟಿರುವ 3 ಐಆರ್‌ಬಿಎನ್ ಜವಾನರ ವಜಾ

Update: 2025-04-13 21:20 IST
ಗಾಂಜಾದೊಂದಿಗೆ ಬಂಧಿಸಲ್ಪಟ್ಟಿರುವ 3 ಐಆರ್‌ಬಿಎನ್ ಜವಾನರ ವಜಾ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಭುವನೇಶ್ವರ: ಹದಿನೈದು ಕೆಜಿ ಗಾಂಜಾದೊಂದಿಗೆ ಬಂಧಿಸಲ್ಪಟ್ಟಿರುವ ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್‌ಬಿಎನ್)ನ ಮೂವರು ಜವಾನರನ್ನು ಶನಿವಾರ ಸರಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಇಂಡಿಯನ್ ರಿಸರ್ವ್ ಬೆಟಾಲಿಯನ್‌ ಗೆ ಸೇರಿದ ಐದನೇ ಬೆಟಾಲಿಯನ್‌ ನ ಕುನಾಲ್ ಸಿಂಗ್, ತ್ರಿಲೋಚನ್ ರಾಣಾ ಮತ್ತು ನೀಲಮ್ ಬರ್ಲಾ ಎಂಬುದಾಗಿ ಗುರುತಿಸಲಾಗಿದೆ.

ಒಡಿಶಾ ಪೊಲೀಸರು ಬೌದ್ ಜಿಲ್ಲೆಯಲ್ಲಿರುವ ಅವರ ಬರಾಕ್‌ಗಳ ಮೇಲೆ ಮಾರ್ಚ್ 25ರಂದು ದಾಳಿ ನಡೆಸಿ ಮಾದಕ ದ್ರವ್ಯ ಸಮೇತ ಅವರನ್ನು ಬಂಧಿಸಿದ್ದರು.

ಹವಿಲ್ದಾರ್ ಕುನಾಲ್ ಸಿಂಗ್ ಬಳಿಕ 5 ಕೆಜಿ ಮಾದಕ ದ್ರವ್ಯ ಪತ್ತೆಯಾದರೆ, ಕಾನ್‌ಸ್ಟೇಬಲ್‌ಗಳಾದ ತ್ರಿಲೋಚನ್ ರಾಣಾ ಮತ್ತು ನೀಲಮ್ ಬರ್ಲ ಬಳಿ ಕ್ರಮವಾಗಿ 7 ಕೆಜಿ ಮತ್ತು 3 ಕೆಜಿ ಗಾಂಜಾ ಸಿಕ್ಕಿದೆ.

‘‘ಮನಮುಂಡ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮೂವರು ಜವಾನರನ್ನು ಕೆಲವು ದಿನಗಳ ಹಿಂದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ’’ ಎಂದು ಬೌದ್ ಪೊಲೀಸ್ ಸೂಪರಿಂಟೆಂಡೆಂಟ್ ರಾಹುಲ್ ಗೋಯಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News