ಗುಜರಾತ್ ನಲ್ಲಿ 3.4 ತೀವ್ರತೆಯ ಭೂಕಂಪನ
ಗುಜರಾತ್: ಕಚ್ ಜಿಲ್ಲೆಯಲ್ಲಿ ರವಿವಾರ ಮುಂಜಾನೆ 3.4 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಕೇಂದ್ರ(ಐಎಸ್ಆರ್) ತಿಳಿಸಿದೆ. ಭೂಕಂಪನದಿಂದ ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ 3.58ಕ್ಕೆ ಭೂಕಂಪನ ಸಂಭವಿಸಿದ್ದು, ಭೂಕಂಪನದ ಕೇಂದ್ರಬಿಂದು ಲಖ್ಪತ್ನಿಂದ ಈಶಾನ್ಯಕ್ಕೆ 53 ಕಿಮೀ ದೂರದಲ್ಲಿದೆ ಎಂದು ಐಎಸ್ಆರ್ ತಿಳಿಸಿದೆ.
ಇದಕ್ಕೂ ಮೊದಲು ಅ.27ರಂದು ಗುಜರಾತ್ ನ ಸೌರಾಷ್ಟ್ರ ಪ್ರದೇಶದ ಅಮ್ರೇಲಿ ಜಿಲ್ಲೆಯಲ್ಲಿ 3.7 ತೀವ್ರತೆಯ ಭೂಕಂಪನ ಸಂಭವಿಸಿತ್ತು.
ಗುಜರಾತ್ ಹೆಚ್ಚು ಭೂಕಂಪನದ ಅಪಾಯಗಳನ್ನು ಹೊಂದಿರುವ ರಾಜ್ಯವಾಗಿದೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಕಳೆದ 200 ವರ್ಷಗಳಲ್ಲಿ ರಾಜ್ಯದಲ್ಲಿ 9 ಪ್ರಬಲ ಭೂಕಂಪಗಳು ಸಂಭವಿಸಿದೆ.
2001ರಲ್ಲಿ ಕಚ್ ನಲ್ಲಿ ಸಂಭವಿಸಿದ್ದ ಭೂಕಂಪವು ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಸಂಭವಿಸಿದ 3ನೇ ಅತಿದೊಡ್ಡ ಮತ್ತು 2ನೇ ಅತ್ಯಂತ ವಿನಾಶಕಾರಿ ಭೂಕಂಪವಾಗಿದೆ.