ಕರ್ನಾಟಕದ ಮೂವರಿಂದ ಮಹಾರಾಷ್ಟ್ರದ ವೈದ್ಯರಿಗೆ 3.84 ಕೋಟಿ ರೂ. ವಂಚನೆ

Update: 2024-11-09 14:26 GMT

ಸಾಂದರ್ಭಿಕ ಚಿತ್ರ 

ಥಾಣೆ: ಕರ್ನಾಟಕದ ಮೂವರು ವ್ಯಕ್ತಿಗಳು ಸ್ಥಳೀಯ ಸಂಸ್ಥೆಯೊಂದಕ್ಕೆ ವೈದ್ಯಕೀಯ ಸಾಧನಗಳನ್ನು ಪೂರೈಸುವ ಒಪ್ಪಂದದಿಂದ ಲಾಭದ ಆಮಿಷವೊಡ್ಡಿ ಮಹಾರಾಷ್ಟ್ರದ ಥಾಣೆಯ ವೈದ್ಯರೋರ್ವರಿಗೆ 3.84 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಪೋಲಿಸ್ ಅಧಿಕಾರಿಯೋರ್ವರು ಶನಿವಾರ ಇಲ್ಲಿ ತಿಳಿಸಿದರು.

‘ಆರೋಪಿಗಳು ಡಿಸೆಂಬರ್ 1,2020 ಮತ್ತು ಈ ವರ್ಷದ ಮಾರ್ಚ್ 17ರ ನಡುವೆ ಒಪ್ಪಂದಕ್ಕೆ ಸಂಬಂಧಿಸಿದ ವಿವಿಧ ಸಾಮಗ್ರಿಗಳಲ್ಲಿ 39ರ ಹರೆಯದ ವೈದ್ಯರು ಹಣವನ್ನು ಹೂಡುವಂತೆ ಮಾಡಿದ್ದರು. ಆದರೆ ತನ್ನ ಹೂಡಿಕೆಯ ಮೇಲೆ ಯಾವುದೇ ಲಾಭ ಸಿಗದಿದ್ದಾಗ ವೈದ್ಯರು ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ. ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ,ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ’ ಎಂದು ನೌಪಾಡಾ ಪೋಲಿಸ್ ಠಾಣೆಯ ಅಧಿಕಾರಿ ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News