'ನಿರ್ಲಕ್ಷ್ಯದಿಂದ ಸಾವು' ಅಪರಾಧಗಳ ಶಿಕ್ಷೆ: ಐದು ವರ್ಷಗಳಿಗೆ ಇಳಿಸಲು ಸಂಸದೀಯ ಸಮಿತಿ ಸಲಹೆ

Update: 2023-11-12 16:37 GMT

Photo - PTI

ಹೊಸದಿಲ್ಲಿ: ನಿರ್ಲಕ್ಷ್ಯದಿಂದ ಬೇರೆಯವರ ಸಾವಿಗೆ ಕಾರಣವಾದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಸ್ತಾವಿತ ನೂತನ ಕ್ರಿಮಿನಲ್ ಕಾನೂನಿನಲ್ಲಿ ನಿಗದಿಪಡಿಸಿರುವುದು ತೀರಾ ಹೆಚ್ಚಾಗಿದ್ದು, ಅದನ್ನು ಐದು ವರ್ಷಗಳಿಗೆ ಇಳಿಸಬೇಕೆಂದು ಸಂಸದೀಯ ಸಮಿತಿಯೊಂದು ಅಭಿಪ್ರಾಯಿಸಿದೆ.

ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯದಿಂದಾಗಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಲ್ಲದೆ, ಘಟನಾ ಸ್ಥಳದಿಂದ ಪರಾರಿಯಾದಲ್ಲಿ ಅಥವಾ ಘಟನೆಯ ಬಗ್ಗೆ ಪೊಲೀಸರು ಅಥವಾ ಮ್ಯಾಜಿಸ್ಟ್ರೇಟರಿಗೆ ತಿಳಿಸಲು ವಿಫಲರಾದಲ್ಲಿ ಅಂತಹ ಅಪರಾಧಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕೆಂದು ಭಾರತೀಯ ನ್ಯಾಯ ಸಂಹಿತೆ ಮಾಡಿರುವ ಶಿಫಾರಸನ್ನು ಉಳಿಸಿಕೊಳ್ಳಬೇಕೇ ಎಂಬ ಬಗ್ಗೆ ಚರ್ಚೆಯಾಗಬೇಕಾದ ಅಗತ್ಯವಿದೆ ಎಂದು ಬಿಜೆಪಿ ಸಂಸದ ಬ್ರಿಜಾಲ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯಿಸಿದೆ.

ಪ್ರಸಕ್ತ ಅಸ್ತಿತ್ವದಲ್ಲಿರುವ ಭಾರತೀಯ ದಂಡಸಂಹಿತೆಯ 304ಎ ಸೆಕ್ಷನ್ನಲ್ಲಿ ಇದೇ ರೀತಿಯ ಅಪರಾಧಕ್ಕಾಗಿ ಗರಿಷ್ಠ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ಬಿಎನ್ಎಸ್ ಸಂಹಿತೆಯ ಎಂದು ಸಮಿತಿ ಗಮನ ಸೆಳೆದಿದೆ.

ಒಂದು ವೇಳೆ ಈ ಕಾನೂನನ್ನು ಉಳಿಸಲೇಬೇಕೆಂದಿದ್ದಲ್ಲಿ ಸರಕಾರವು ಭಾರತೀಯ ನ್ಯಾಯ ಸಂಹಿತೆಯ 104(2) ಪರಿಚ್ಛೇದವನ್ನು ಮೋಟಾರು ವಾಹನ ಅವಘಡಗಳಿಗೆ ಮಾತ್ರವೇ ಅನ್ವಯಿಸಬೇಕೆಂದು ಸಮಿತಿಯು ಸಲಹೆ ನೀಡಿದೆ.

ಬಿಎನ್ಎಸ್ ಸಂಹಿತೆಯ ಸೆಕ್ಷನ್ 104(2) ಪ್ರಕಾರ, ಯಾವುದೇ ರೀತಿಯ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯದಿಂದಾಗಿ ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾದಲ್ಲಿ ಆತನಿಗೆ/ಆಕೆಗೆ ಕೊಲೆಯಲ್ಲದ, ಆದರೆ ದಂಡನೀಯವಾದ ನರಹತ್ಯೆಯ ಅಪರಾಧಕ್ಕಾಗಿ ಜೈಲುಶಿಕ್ಷೆಯನ್ನು ನಿಧಿಸಬಹುದಾಗಿದ್ದು, ಅದನ್ನು ಏಳು ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ.

ಕೇಂದ್ರ ಸರಕಾರವು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್-2023), ಭಾರತೀಯ ನಾಗರಿಕ ಸಂಹಿತೆ (ಬಿಎನ್ಎಸ್-2023), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್-2023) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್ಎ-2023) ಕಾನೂನುಗಳನ್ನು ಈ ವರ್ಷದ ಆಗಸ್ಟ್ನಲ್ಲಿ ಲೋಕಸಭಾದಲ್ಲಿ ಮಂಡಿಸಿತ್ತು.

ಈ ನಾಲ್ಕು ಕಾನೂನುಗಳು ವಸಾಹತಶಾಹಿ ಕಾಲದ ಶಾಸನಗಳಾದ ಭಾರತೀಯ ದಂಡಸಂಹಿತೆ 1860, ಕ್ರಿಮಿನಲ್ ಕಾನೂನು ಪ್ರಕ್ರಿಯಾ ಕಾಯ್ದೆ 1898 ಹಾಗೂ 1872ರ ಭಾರತೀಯ ದಂಡಸಂಹಿತೆಯನ್ನು ತೆರವುಗೊಳಿಸುವ ಉದ್ದೇಶವನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News