ರೆಸ್ಟೋರೆಂಟ್ ಆಹಾರದಲ್ಲಿ ಸತ್ತು ಬಿದ್ದಿರುವ ಇಲಿಯ ಚಿತ್ರವನ್ನು ಪೋಸ್ಟ್ ಮಾಡಿದ ವ್ಯಕ್ತಿ: ಆಘಾತಕ್ಕೀಡಾದ ನೆಟ್ಟಿಗರು
ಈ ವಿಡಿಯೊವನ್ನು NC ಎಂಬ ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಆ ಸಣ್ಣ ವಿಡಿಯೊ ತುಣುಕಿನಲ್ಲಿ ವ್ಯಕ್ತಿಯೊಬ್ಬರು ಮೇಜಿನ ಮೇಲೆ ಇಡಲಾಗಿರುವ ಆಹಾರ ಪದಾರ್ಥಗಳನ್ನು ತೋರಿಸುತ್ತಿದ್ದಾರೆ. ನಂತರ, ಆತ ಖಾದ್ಯವೊಂದರ ಮೇಲೆ ಕ್ಯಾಮೆರಾವನ್ನು ಹಿಡಿದಿದ್ದು,
ಲೂಧಿಯಾನಾ: ಪಂಜಾಬ್ ರಾಜ್ಯದ ಲೂಧಿಯಾನಾದ ಪ್ರಖ್ಯಾತ ರೆಸ್ಟೋರೆಂಟ್ ಒಂದು ಪೂರೈಸಿರುವ ತಿನಿಸಿನಲ್ಲಿ ಸತ್ತ ಇಲಿ ಕಂಡು ಬಂದಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಆರೋಪಿಸಿದ್ದಾರೆ. ಆ ವೈರಲ್ ವಿಡಿಯೊದಲ್ಲಿ ಪ್ರಕಾಶ್ ಧಾಭಾದಲ್ಲಿ ಪೂರೈಸಲಾಗಿರುವ ಮಾಂಸಾಹಾರಿ ಸಾರಿನಲ್ಲಿ ಸತ್ತ ಇಲಿಯೊಂದು ಇರುವುದು ಕಂಡು ಬಂದಿದೆ. ಆದರೆ, ಈ ಎಲ್ಲ ಆರೋಪಗಳನ್ನು ನಿರಾಕರಿಸಿರುವ ರೆಸ್ಟೋರೆಂಟ್, ಗ್ರಾಹಕರು ನಮ್ಮ ಸಂಸ್ಥೆಯ ಹೆಸರನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿ ಆರೋಪ ಮಾಡಿದೆ ಎಂದು ndtv.com ವರದಿ ಮಾಡಿದೆ.
ಈ ವಿಡಿಯೊವನ್ನು NC ಎಂಬ ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಆ ಸಣ್ಣ ವಿಡಿಯೊ ತುಣುಕಿನಲ್ಲಿ ವ್ಯಕ್ತಿಯೊಬ್ಬರು ಮೇಜಿನ ಮೇಲೆ ಇಡಲಾಗಿರುವ ಆಹಾರ ಪದಾರ್ಥಗಳನ್ನು ತೋರಿಸುತ್ತಿದ್ದಾರೆ. ನಂತರ, ಆತ ಖಾದ್ಯವೊಂದರ ಮೇಲೆ ಕ್ಯಾಮೆರಾವನ್ನು ಹಿಡಿದಿದ್ದು, ಅದರಲ್ಲಿ ಆತ ಚಮಚಾ ಬಳಸಿ ಅದರಿಂದ ಸತ್ತ ಇಲಿಯನ್ನು ಹೊರ ತೆಗೆಯುತ್ತಿರುವುದು ಸೆರೆಯಾಗಿದೆ. ಆ 31 ಸೆಕೆಂಡುಗಳ ಸಣ್ಣ ಅವಧಿಯ ತುಣುಕಿನಲ್ಲಿ ಬಾಲವನ್ನೂ ನೋಡಬಹುದಾಗಿದೆ.
"ಲೂಧಿಯಾನಾದಲ್ಲಿನ ಪ್ರಕಾಶ್ ಧಾಭಾ. ಭಾರತವು ಕೋಳಿ ಸಾರಿನಲ್ಲಿ ಇಲಿಯನ್ನು ಒದಗಿಸುತ್ತದೆ. ರೆಸ್ಟೋರೆಂಟ್ ಮಾಲಕರು ಆಹಾರ ನಿರೀಕ್ಷಕರಿಗೆ ಲಂಚ ನೀಡಿಯೇನಾದರೂ ಪಾರಾಗುತ್ತಿದ್ದಾರಾ? ಭಾರತದ ಹಲವಾರು ಅಡುಗೆ ಕೋಣೆಗಳಲ್ಲಿನ ಗುಣಮಟ್ಟವು ತೀರಾ ಕಳಪೆಯಾಗಿದೆ. ಹುಷಾರಾಗಿರಿ" ಎಂದು ಆ ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.
ಈ ನಡುವೆ, ಫೇಸ್‌ಬುಕ್‌ನಲ್ಲಿ ಪ್ರಕಟವಾಗಿರುವ ಮತ್ತೊಂದು ವಿಡಿಯೊದಲ್ಲಿ ಗ್ರಾಹಕ ಹಾಗೂ ರೆಸ್ಟೋರೆಂಟ್ ಆಡಳಿತ ಮಂಡಳಿಯ ನಡುವೆ ಬಿಸಿ ಬಿಸಿ ಮಾತಿನ ಚಕಮಕಿ ನಡೆಯುತ್ತಿರುವುದು ಸೆರೆಯಾಗಿದ್ದು, ಸದರಿ ಗ್ರಾಹಕನು ತನಗೆ ಸತ್ತ ಇಲಿಯನ್ನು ಪೂರೈಸಲಾಗಿದೆ ಎಂದು ಆರೋಪಿಸುತ್ತಿರುವುದು ಕಂಡು ಬಂದಿದೆ.
ಈ ವಿಡಿಯೊ ಹಲವಾರು ಅಂತರ್ಜಾಲ ಬಳಕೆದಾರರಿಗೆ ಆಘಾತವನ್ನುಂಟು ಮಾಡಿದ್ದು, ಅವರೆಲ್ಲ ರೆಸ್ಟೋರೆಂಟ್‌ನ ನಿರ್ಲಕ್ಷತೆ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಓರ್ವ ಬಳಕೆದಾರರು, "ಈ ವಿಷಯವನ್ನು ಆರೋಗ್ಯ ಪ್ರಾಧಿಕಾರಗಳು ನಿರ್ದಾಕ್ಷಿಣ್ಯವಾಗಿ ನಿರ್ವಹಿಸಬೇಕು" ಎಂದು ಆಗ್ರಹಿಸಿದ್ದಾರೆ.
ಮತ್ತೊಬ್ಬರು, "ಆ ಸಾರನ್ನು ಸೇವಿಸಿದ ಎಲ್ಲರ ಬಗ್ಗೆ ಕನಿಕರವಾಗುತ್ತಿದೆ. ಇದು ನೇರವಾಗಿ ಗ್ರಾಹಕರ ನ್ಯಾಯಾಲಯದ ಪ್ರಕರಣವಾಗಿದೆ. ಇನ್ನು ಕೆಲವು ವರ್ಷ ಕಳೆದ ನಂತರ ಈ ಪ್ರಕರಣಕ್ಕೆ ಭಾರಿ ದಂಡ ವಿಧಿಸುವುದನ್ನು ನಿರೀಕ್ಷಿಸಬಹುದಾಗಿದೆ" ಎಂದು ಹೇಳಿದ್ದಾರೆ.
"ಚಿಂತಾಜನಕ" ಎಂದು ಮಗದೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ನಾಲ್ಕನೆಯ ವ್ಯಕ್ತಿಯೊಬ್ಬರು, "ರೆಸ್ಟೋರೆಂಟ್‌ನ ಪರವಾನಗಿಯನ್ನು ರದ್ದುಗೊಳಿಸಬೇಕು" ಎಂದು ಆಗ್ರಹಿಸಿದ್ದಾರೆ.
ಟ್ವಿಟರ್ ಬಳಕೆದಾರರೊಬ್ಬರು, "ಈ ರೆಸ್ಟೋರೆಂಟ್ ಹೆಸರು LFC (ಲೂಧಿಯಾನಾ ಪ್ರೈಡ್ ಚುಹಾ) ಎಂದಿರಬೇಕಿತ್ತು" ಎಂದು ಗೇಲಿ ಮಾಡಿದ್ದಾರೆ.
"ಇದು ಲೂಧಿಯಾನಾದಲ್ಲಿ ಹೊಸದೇನೂ ಅಲ್ಲ. ಇಲ್ಲಿನ ಮಾಲಕರು ಸಂಪೂರ್ಣ ಸುಳ್ಳು ಹೇಳುತ್ತಾರೆ. ಈ ಉಪಾಹಾರ ಗೃಹಗಳ ತೆರೆದ ಅಡುಗೆ ಕೋಣೆಗಳು ಗಲೀಜಾಗಿದ್ದು, ದೊಡ್ಡ ಸಂಖ್ಯೆಯ ಇಲಿಗಳನ್ನಿಲ್ಲಿ ನೋಡಬಹುದಾಗಿದೆ. ಇಲಿಗಳು ಕಂಡು ಬರುವ ಹಲವಾರು ಪ್ರಖ್ಯಾತ ರೆಸ್ಟೋರೆಂಟ್‌ಗಳನ್ನು ಲೂಧಿಯಾನಾದಲ್ಲಿ ನೋಡಬಹುದಾಗಿದೆ" ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.