ಒಂದು ಶ್ರೇಣಿ ಒಂದು ಪಿಂಚಣಿ | ಕ್ಯಾಪ್ಟನ್‌ ಗಳ ಪಿಂಚಣಿ ಗೊಂದಲ ; ಕೇಂದ್ರಕ್ಕೆ ಸುಪ್ರೀಂ ತರಾಟೆ, 2 ಲಕ್ಷ ರೂ.ದಂಡ

Update: 2024-07-30 16:54 GMT

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ : ಸೇನೆಯಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕ್ಯಾಪ್ಟನ್‌ ಗಳಿಗೆ ‘‘ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ಒಪಿ)’ ಯೋಜನೆಗೆ ಅನುಗುಣವಾಗಿ ನೀಡಬೇಕಾದ ಪಿಂಚಣಿಯ ಕುರಿತು ವರ್ಷಗಳಿಂದಲೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವೈಫಲ್ಯಕ್ಕಾಗಿ ಮಂಗಳವಾರ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಛ ನ್ಯಾಯಾಲಯವು ಅದಕ್ಕೆ ಎರಡು ಲಕ್ಷ ರೂ.ಗಳ ದಂಡವನ್ನು ವಿಧಿಸಿತು.

ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ಆರ್.ಮಹಾದೇವನ್ ಅವರ ಪೀಠವು ಯೋಜನೆಯಡಿ ಇಂತಹ ನಿವೃತ್ತ ಅಧಿಕಾರಿಗಳಿಗೆ ಪಿಂಚಣಿಗಳಲ್ಲಿನ ತಾರತಮ್ಯವನ್ನು ನಿವಾರಿಸಲು ಕೇಂದ್ರಕ್ಕೆ ನ.14ರವರೆಗೆ ಕೊನೆಯ ಅವಕಾಶವನ್ನು ನೀಡಿತು.

ದಂಡದ ಹಣವನ್ನು ಸೇನೆಯ ಕಲ್ಯಾಣ ನಿಧಿಗೆ ಜಮೆ ಮಾಡುವಂತೆ ಸರಕಾರಕ್ಕೆ ಸೂಚಿಸಿದ ಸರ್ವೋಚ್ಛ ನ್ಯಾಯಾಲಯವು,ನ.14ರೊಳಗೆ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ನಿವೃತ್ತ ಕ್ಯಾಪ್ಟನ್‌ ಗಳಿಗೆ ಪಿಂಚಣಿಯನ್ನು ಶೇ.10ರಷ್ಟು ಹೆಚ್ಚಿಸುವಂತೆ ತಾನು ನಿರ್ದೇಶನ ನೀಡುವುದಾಗಿ ಎಚ್ಚರಿಸಿತು. ಪ್ರಕರಣದ ಮುಂದಿನ ವಿಚಾರಣೆ ನ.25ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News