ನಟಿಯ ಅತ್ಯಾಚಾರ ಪ್ರಕರಣ: ಮಲಯಾಳಂ ನಟ ಮುಕೇಶ್ ಬಂಧನ

Update: 2024-09-24 10:00 GMT

ಶಾಸಕ ಹಾಗೂ ನಟ ಎಂ. ಮುಕೇಶ್ (Photo: Facebook)

ಕೇರಳ: ನಟಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಪಿಐ(ಎಂ) ಶಾಸಕ ಹಾಗೂ ನಟ ಎಂ. ಮುಕೇಶ್ ಅವರನ್ನು ಎಸ್ಐಟಿ ತಂಡ ಬಂಧಿಸಿದೆ.

ಶಾಸಕರನ್ನು ಬಂಧಿಸಿ ಎಸ್ ಐಟಿ ತಂಡ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಬಿಡುಗಡೆ ಮಾಡಿದೆ. ಅವರಿಗೆ ಕೆಳ ನ್ಯಾಯಾಲಯವು ಈ ಹಿಂದೆ ನಿರೀಕ್ಷಣಾ ಜಾಮೀನು ನೀಡಿದ್ದರಿಂದ ವೈದ್ಯಕೀಯ ಪರೀಕ್ಷೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.

ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಂದೆ ಬೆಳಗ್ಗೆ 9.45ಕ್ಕೆ ಮುಕೇಶ್ ವಿಚಾರಣೆಗೆ ಹಾಜರಾಗಿದ್ದರು. ಮೂರೂವರೆ ಗಂಟೆಗಳ ಕಾಲ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News