ಗುಜರಾತ್|‌ ರೈಲ್ವೇ ಹಳಿ ತಿರುಚಿದ ಪ್ರಕರಣಕ್ಕೆ ತಿರುವು: ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ನಾಟಕವಾಡಿದ್ದ ರೈಲ್ವೇ ಸಿಬ್ಬಂದಿಗಳ ಬಂಧನ

Update: 2024-09-24 08:24 GMT

Photo credit: indiatoday.in

ಸೂರತ್: ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ರೈಲ್ವೆ ಹಳಿಗಳನ್ನು ತಾವೇ ತಿರುಚಿ ಸಂಭವನೀಯ ರೈಲು ಅಪಘಾತ ತಪ್ಪಿಸಿದ ನಾಟಕವಾಡಿದ ಮೂವರು ರೈಲ್ವೆ ಸಿಬ್ಬಂದಿಗಳನ್ನು ಗುಜರಾತ್ ನ ಸೂರತ್ ನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ರೈಲ್ವೆ ಸಿಬ್ಬಂದಿಗಳನ್ನು ಸುಭಾಷ್ ಪೊಡ್ಡಾರ್ (39), ಮನೀಶ್ ಮಿಸ್ತ್ರಿ (28) ಹಾಗೂ ಶುಭಂ ಜೈಸ್ವಾಲ್ (26) ಎಂದು ಗುರುತಿಸಲಾಗಿದೆ. ಇವರೆಲ್ಲರೂ ನಿರ್ವಹಣಾ ವಿಭಾಗದಲ್ಲಿ ಹಳಿ ಪರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಧ್ವಂಸಕ ಕೃತ್ಯದ ಕುರಿತು ಮಾಹಿತಿ ನೀಡಿದ್ದಕ್ಕೆ ಪುರಸ್ಕೃತರಾಗಲು ಅವರು ಈ ಕೃತ್ಯವೆಸಗಿದ್ದಾರೆ ಎಂದು ಸೂರತ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹೊತೇಶ್ ಜಾಯ್ಸರ್ ಹೇಳಿದ್ದಾರೆ.

ಸೆಪ್ಟೆಂಬರ್ 21ರಂದು ರೈಲನ್ನು ಹಳಿ ತಪ್ಪಿಸುವ ಪ್ರಯತ್ನದ ಭಾಗವಾಗಿ ರೈಲ್ವೆ ಹಳಿಯೊಂದರ ಫಿಶ್ ಪ್ಲೇಟ್ ಗಳನ್ನು ತೆಗೆದು, ಹಲವಾರು ಬೋಲ್ಟ್ ಗಳನ್ನು ಸಡಿಲಗೊಳಿಸಿದ್ದ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಸೂರತ್ ಪೊಲೀಸರು ತನಿಖೆ ಕೈಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News