ಮಹಾರಾಷ್ಟ್ರ: ಮತದಾನದ ಅಂತಿಮ ದತ್ತಾಂಶದಲ್ಲಿನ ವ್ಯತ್ಯಾಸದ ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಕಳವಳ

Update: 2024-11-28 06:38 GMT

ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೈಶಿ (Photo: PTI)

ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿನ ಮತದಾನದ ದತ್ತಾಂಶದಲ್ಲಿನ ದೊಡ್ಡ ಮಟ್ಟದ ವ್ಯತ್ಯಾಸದ ಬಗ್ಗೆ ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೈಶಿ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆದ ನವೆಂಬರ್ 20ರ ಸಂಜೆ 5 ಗಂಟೆಗೆ 55% ಮತದಾನವಾಗಿದೆ ಎಂದು ಹೇಳಲಾಗಿದೆ. ಮರುದಿನ ಬಿಡುಗಡೆಯಾದ ಅಂತಿಮ ಮತದಾನದ ಅಂಕಿ-ಅಂಶವು 67% ಕ್ಕೆ ಏರಿಕೆಯಾಗಿದೆ. ಇದು ಸುಮಾರು ಮೂರು ದಶಕಗಳಲ್ಲಿ ಅತಿ ಹೆಚ್ಚಾಗಿದೆ ಎಂದು ಎಸ್ ವೈ ಖುರೈಶಿ ಹೇಳಿದ್ದಾರೆ.

INDIA TODAYಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ 2010-2012ರ ನಡುವೆ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಸ್ ವೈ ಖುರೈಶಿ, ಮತದಾರರ ಮತದಾನದ ಅಂಕಿಅಂಶಗಳಲ್ಲಿನ ಭಾರೀ ಬದಲಾವಣೆಯು "ಚಿಂತನೀಯ" ಎಂದು ಹೇಳಿದ್ದಾರೆ.

ನಮೂನೆ 17ಸಿ ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ದಾಖಲಿಸುತ್ತದೆ. ಇದು ಒಂದೇ ದಿನದಲ್ಲಿ ರಚಿಸಲಾದ ನೈಜ ಸಮಯದ ಅಂಕಿ-ಅಂಶ, ಆದರೆ ಮರುದಿನ ಈ ಅಂಕಿ-ಅಂಶಗಳು ದೊಡ್ಡ ಮಟ್ಟದಲ್ಲಿ ಹೇಗೆ ಬದಲಾಗುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ವಿಫಲನಾಗಿದ್ದೇನೆ ಎಂದು ಖುರೈಶಿ ಹೇಳಿದ್ದಾರೆ.

ಈ ಸಮಸ್ಯೆ ಬಗ್ಗೆ ಚುನಾವಣಾ ಆಯೋಗವು ಸ್ಪಷ್ಟನೆಯನ್ನು ನೀಡಬೇಕು. ದೇಶದಾದ್ಯಂತ ಇಂತಹ ಅನುಮಾನಗಳು ಪ್ರತಿಯೊಬ್ಬರ ತಲೆಗೆ ಬಂದರೆ, ಇಡೀ ವ್ಯವಸ್ಥೆ ಮೇಲೆ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಎಂದು ಖುರೈಶಿ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News