ಹೊಸದಿಲ್ಲಿ | ಸೈಬರ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ED ತಂಡದ ಮೇಲೆ ದಾಳಿ: ಹಿರಿಯ ಅಧಿಕಾರಿಗೆ ಗಾಯ

Update: 2024-11-28 11:04 IST
Photo of attack on ED officials
Photo credit: PTI
  • whatsapp icon

ಹೊಸದಿಲ್ಲಿ: ಸೈಬರ್ ವಂಚನೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಬಿಜ್ವಾಸನ್ ಪ್ರದೇಶದಲ್ಲಿ ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳ ಮೇಲೆ ತಂಡವೊಂದು ದಾಳಿ ನಡೆಸಿದ್ದು, ಘಟನೆಯಲ್ಲಿ ಈಡಿ ಹೆಚ್ಚುವರಿ ನಿರ್ದೇಶಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸೈಬರ್ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಈಡಿ ತಂಡ ದಿಲ್ಲಿಯ ಬಿಜ್ವಾಸನ್ ಪ್ರದೇಶದಲ್ಲಿ ಶಂಕಿತ ಆರೋಪಿ ಅಶೋಕ್ ಶರ್ಮಾ ಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಅಶೋಕ್ ಶರ್ಮಾ ಮತ್ತು ಇತರರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಬಗ್ಗೆ ಎಫ್ಐಆರ್ ದಾಖಲಿಸಲಾಗುತ್ತಿದೆ. ದಾಳಿ ವೇಳೆ ತನಿಖಾ ತಂಡದಲ್ಲಿದ್ದ ಜಾರಿ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಗಾಯಗೊಂಡಿದ್ದಾರೆ ಎಂದು ಈಡಿ ಮೂಲಗಳು ತಿಳಿಸಿದೆ.

ಕ್ಯೂಆರ್ ಕೋಡ್ ವಂಚನೆ ಮತ್ತು ಅರೆಕಾಲಿಕ ಉದ್ಯೋಗ ಹಗರಣಗಳು ಸೇರಿದಂತೆ ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ತನಿಖೆಗೆ ಉನ್ನತ ಸಮಿತಿಯನ್ನು ರಚಿಸಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News