ದೇಶದಲ್ಲಿ 58,929 ವಕ್ಫ್ ಆಸ್ತಿಗಳ ಅತಿಕ್ರಮಣ, ಕರ್ನಾಟಕದಲ್ಲಿ 869 ಪ್ರಕರಣಗಳು : ಕೇಂದ್ರ

Update: 2024-11-27 16:14 GMT

ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ

About Karnataka State Board Of Auqaf

ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ

ಹೊಸದಿಲ್ಲಿ : ದೇಶದಲ್ಲಿ 58,929 ವಕ್ಫ್ ಆಸ್ತಿಗಳು ಅತಿಕ್ರಮಣಕ್ಕೆ ಒಳಗಾಗಿದ್ದು, ಈ ಪೈಕಿ 869 ಕರ್ನಾಟಕದಲ್ಲಿವೆ ಎಂದು ಕೇಂದ್ರ ಸರಕಾರವು ಬುಧವಾರ ತಿಳಿಸಿದೆ.

ತನ್ನ ಸಚಿವಾಲಯ ಮತ್ತು ಕೇಂದ್ರೀಯ ವಕ್ಫ್ ಮಂಡಳಿಗೆ ಕಾಲ ಕಾಲಕ್ಕೆ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ದೂರುಗಳು ಬಂದಿದ್ದು, ಅವುಗಳನ್ನು ಸೂಕ್ತ ಕ್ರಮಕ್ಕಾಗಿ ರಾಜ್ಯ ವಕ್ಫ್ ಮಂಡಳಿಗಳು ಮತ್ತು ಸರಕಾರಗಳಿಗೆ ಕಳುಹಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಡಬ್ಲ್ಯುಎಎಂಎಸ್‌ಐ(ಭಾರತದ ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆ)ನಲ್ಲಿ ಲಭ್ಯ ವಿವರಗಳಂತೆ 58,929 ವಕ್ಫ್ ಆಸ್ತಿಗಳು ಅತಿಕ್ರಮಣವನ್ನು ಎದುರಿಸುತ್ತಿದ್ದು,ಈ ಪೈಕಿ 869 ಆಸ್ತಿಗಳು ಕರ್ನಾಟಕದಲ್ಲಿವೆ ಎಂದು ಹೇಳಿರುವ ರಿಜಿಜು, ವಕ್ಫ್ ಕಾಯ್ದೆಯ ಕಲಂ 54 ಮತ್ತು 55ರಂತೆ ರಾಜ್ಯ ವಕ್ಫ್ ಮಂಡಳಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಧಿಕೃತ ಒತ್ತುವರಿ ಮತ್ತು ಅತಿಕ್ರಮಣದ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಇದಲ್ಲದೆ ವಕ್ಫ್ ಕಾಯ್ದೆಯ 51(1-ಎ) ಕಲಮ್‌ನಂತೆ ವಕ್ಫ್ ಆಸ್ತಿಯ ಯಾವುದೇ ಮಾರಾಟ, ಉಡುಗೊರೆ, ವಿನಿಮಯ, ಅಡಮಾನ ಅಥವಾ ವರ್ಗಾವಣೆ ಅನೂರ್ಜಿತವಾಗಿರುತ್ತದೆ ಎಂದು ರಿಜಿಜು ಹೇಳಿದ್ದಾರೆ.

ಕೇಂದ್ರ ಸರಕಾರವು ಕಾಯ್ದೆಯ ಕಲಂ 56ರಡಿ ವಕ್ಫ್ ಆಸ್ತಿಗಳ ಲೀಸ್ ನಿಯಮಗಳು,2014ನ್ನು ರೂಪಿಸಿದ್ದು, ವಕ್ಫ್ ಆಸ್ತಿಗಳನ್ನು ಲೀಸ್ ಆಧಾರದಲ್ಲಿ ನೀಡಲು ಈ ನಿಯಮಗಳು ರಾಜ್ಯ ವಕ್ಫ್ ಮಂಡಳಿಗಳಿಗೆ ಅಧಿಕಾರವನ್ನು ಒದಗಿಸಿವೆ ಎಂದೂ ರಿಜಿಜು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News