ʼಅಗ್ನಿವೀರ್ʼ ಯೋಜನೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ : ರಾಹುಲ್ ಗಾಂಧಿ

Update: 2024-05-22 13:22 GMT

ರಾಹುಲ್ ಗಾಂಧಿ | PC : PTI  

ಹೊಸದಿಲ್ಲಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ʼಅಗ್ನಿವೀರ್ʼ ಯೋಜನೆಯನ್ನು ಕಸದಬುಟ್ಟಿಗೆ ಎಸೆಯುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಹರಿಯಾಣದ ಮಹೇಂದ್ರಘರ್ ನಲ್ಲಿ ನಡೆದ ಸಾರ್ವಜನಿಕರ ಬೃಹತ್ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಯೋಧರನ್ನು ಪ್ರಧಾನಿ ನರೇಂದ್ರ ಮೋದಿಯವರು ಕಾರ್ಮಿಕರಂತೆ ಮಾಡಿದ್ದಾರೆ. ಪ್ರಧಾನ ಮಂತ್ರಿಯವರ ಸಚಿವಾಲಯವು ಜಾರಿಗೆ ತಂದಿರುವ ಅಗ್ನಿವೀರ್ ಯೋಜನೆಯನ್ನು ಸೇನೆಯೂ ಕಿಂಚಿತ್ತೂ ಬಯಸಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

2022ರ ಜೂ.14ರಂದು ಕೇಂದ್ರ ಸರಕಾರ ಅಗ್ನಿವೀರ್‌ ಯೋಜನೆ ಜಾರಿಗೆ ತಂದಿತು. ಈ ಯೋಜನೆಯಡಿ ಸೇನೆ ಸೇರುವ ದೇಶದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅವರಿಗೆ 4 ವರ್ಷಗಳ ಸೇವಾ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. ಅಗ್ನಿವೀರರಿಗೆ EPF/PPF ಸೌಲಭ್ಯವಿದ್ದು, ಪಿಂಚಣಿ ಇರುವುದಿಲ್ಲ. ಸೇವಾ ನಿಧಿ ಪ್ಯಾಕೇಜ್ ಅಡಿ ಮೊದಲ ವರ್ಷದಲ್ಲಿ 4.76 ಲಕ್ಷ ರೂ. ಮತ್ತು 4ನೇ ವರ್ಷದಲ್ಲಿ 6.92 ಲಕ್ಷ ರೂ.ಗಳ ವಾರ್ಷಿಕ ವೇತನ ಸಿಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News