ರಾಷ್ಟ್ರಗೀತೆಯ ವೇಳೆ ಎದ್ದು ನಿಲ್ಲದ ಆರೋಪ: 11 ಮಂದಿಗೆ ಒಂದು ವಾರಗಳ ಜೈಲುಶಿಕ್ಷೆ
ಶ್ರೀನಗರ: ಜಮ್ಮುಕಾಶ್ಮೀರದ ಗವರ್ನರ್ ಮನೋಜ್ ಸಿನ್ಹಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆಗೆ ಎದ್ದು ನಿಲ್ಲದ ಆರೋಪದ ಮೇರೆಗೆ ಹನ್ನೊಂದು ಮಂದಿಯನ್ನು ಏಳು ದಿನಗಳ ಕಾಲ ಕಾರಾಗೃಹಕ್ಕೆ ಕಳುಹಿಸಿದ ಘಟನೆ ಶ್ರೀನಗರದಲ್ಲಿ ನಡೆದಿದೆ ಎಂದು indianexpress ವರದಿ ಮಾಡಿದೆ.
"ಪೆಡಲ್ ಫಾರ್ ಪೀಸ್" ಸೈಕ್ಲಿಂಗ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದವರು ರಾಷ್ಟ್ರಗೀತೆ ನುಡಿಸಿದಾಗ ಎದ್ದು ನಿಲ್ಲಲಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿಫಲರಾದ ಕೆಲವು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಕೆಲವರು ಎದ್ದು ನಿಲ್ಲದಿರುವುದನ್ನು ಮನೋಜ್ ಸಿನ್ಹಾ ಗಮನಿಸಿದ ಬಳಿಕ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಜುಲೈ 3 ರಂದು ಹೊರಡಿಸಿದ ಆದೇಶದಲ್ಲಿ, ಶ್ರೀನಗರದ ಖನ್ಯಾರ್ ತಹಸಿಲ್‌ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು 11 ಜನರನ್ನು ಏಳು ದಿನಗಳ ಕಾಲ ಬಂಧಿಸುವಂತೆ ನಗರದ ನಿಶಾತ್ ಪೊಲೀಸ್ ಠಾಣೆಗೆ ಸೂಚಿಸಿದರು. ಅವರನ್ನು ಬಿಡುಗಡೆ ಮಾಡಿದರೆ ಶಾಂತಿ ಭಂಗ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಸಾಧ್ಯತೆಗಳಿವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮ್ಯಾಜಿಸ್ಟ್ರೇಟ್ ಆದೇಶದ ಪ್ರತಿಯನ್ನು scroll.in ಪರಿಶೀಲಿಸಿದೆ. ಆದರೆ, ಶ್ರೀನಗರ ಪೊಲೀಸರು, ರಾಷ್ಟ್ರಗೀತೆಗೆ ಅಗೌರವ ತೋರಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ವರದಿಗಳು ಸುಳ್ಳು ಎಂದು ಹೇಳಿದ್ದಾರೆ."CrPC [ಅಪರಾಧ ಪ್ರಕ್ರಿಯಾ ಸಂಹಿತೆ] ಸೆಕ್ಷನ್ 107/151 ಅಡಿಯಲ್ಲಿ 12 ವ್ಯಕ್ತಿಗಳನ್ನು ಸಾಮಾನ್ಯವಾಗಿ ಬಂಧಿಸಲಾಗಿದೆ," ಅವರು ತಿಳಿಸಿದ್ದಾರೆ.