ಈಡಿಯ ಆರನೇ ಸಮನ್ಸ್‌ಗೂ ಅರವಿಂದ್ ಕೇಜ್ರಿವಾಲ್ ಗೈರು

Update: 2024-02-19 05:52 GMT

ಅರವಿಂದ್ ಕೇಜ್ರಿವಾಲ್ (Photo: PTI)

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಜಾರಿ ಮಾಡಿರುವ ಆರನೇ ಸಮನ್ಸ್‌ಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೈರಾಗಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷವು, ಈ ಸಮನ್ಸ್ ಕಾನೂನುಬಾಹಿರ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದ್ದು, ಸದ್ಯ ಈ ವಿಷಯ ನ್ಯಾಯಾಲಯದಲ್ಲಿದೆ ಎಂದು ಹೇಳಿದೆ.

ಇಂದು ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಕ್ಷವು, ಜಾರಿ ನಿರ್ದೇಶನಾಲಯವೇ ನ್ಯಾಯಾಲಯದ ಮೆಟ್ಟಿಲೇರಿದೆ. ಈ ವಿಷಯದ ಊರ್ಜಿತತೆ ಕುರಿತು ನ್ಯಾಯಾಲಯ ತನ್ನ ನಿರ್ಧಾರ ಪ್ರಕಟಿಸುವವರೆಗೂ ಜಾರಿ ನಿರ್ದೇಶನಾಲಯವು ಕಾಯಬೇಕು ಎಂದು ತಾನು ಸಲಹೆ ನೀಡುತ್ತೇನೆ ಎಂದು ಹೇಳಿದೆ.

ಜಾರಿ ನಿರ್ದೇಶನಾಲಯವು ನಿರಂತರವಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ಜಾರಿಗೊಳಿಸುತ್ತಿದ್ದು, ಆ ಎಲ್ಲ ಸಮನ್ಸ್‌ಗಳಿಗೂ ಕೇಜ್ರಿವಾಲ್ ಗೈರಾಗುವುದರೊಂದಿಗೆ ಉಭಯತ್ರಯರ ನಡುವಿನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಾ ಸಾಗಿದೆ. ಈ ಹಿಂದಿನ ಸಮನ್ಸ್‌ಗಳಿಗೆ ಗೈರಾಗಲು ಕಾರಣವೇನು ಎಂದು ವಿವರಿಸಲು ತನ್ನೆದುರು ಹಾಜರಾಗುವಂತೆ ದಿಲ್ಲಿ ನ್ಯಾಯಾಲಯವೊಂದು ಕೇಜ್ರಿವಾಲ್‌ಗೆ ಸೂಚಿಸಿರುವ ಬೆನ್ನಿಗೇ ಈ ಆರನೆಯ ಸಮನ್ಸ್ ಅನ್ನು ಜಾರಿ ನಿರ್ದೇಶನಾಲಯ ಜಾರಿಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News