ಶಾಸಕ, ನಟ ಮುಖೇಶ್ ಕುರಿತು ಸುರೇಶ್ ಗೋಪಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ

Update: 2024-08-27 13:25 GMT

PC:X/@Suressh Gopi

ತಿರುವನಂತಪುರಂ : ಸಹ ನಟ ಹಾಗೂ ಶಾಸಕ ಎಂ ಮುಖೇಶ್ ಅವರನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ಹಾಗೂ ನಟ ಸುರೇಶ್ ಗೋಪಿ ಹೇಳಿಕೆಯಿಂದ ಬಿಜೆಪಿ ರಾಜ್ಯ ಘಟಕ ಅಂತರ ಕಾಯ್ದುಕೊಂಡಿದೆ.

ಮುಖೇಶ್ ಕುರಿತು ಗೋಪಿ ಮಾಡಿರುವ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್, ಒಬ್ಬ ನಟನಾಗಿ ಕೇಂದ್ರ ಸಚಿವರು ಹಾಗೆ ಹೇಳಬಹುದು. ಮುಖೇಶ್ ಶಾಸಕ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಬಿಜೆಪಿ ನಿಲುವನ್ನು ಅವರು ಪುನರುಚ್ಚರಿಸಿದರು.

‘ಇಡೀ ಪ್ರಕರಣ ನ್ಯಾಯಾಲಯದ ಮುಂದಿದ್ದು, ಅದರ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತದೆ. ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತು ಮಾಧ್ಯಮಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆ” ಎಂದು ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಆರೋಪಿಸಿದ್ದರು.

ಹೇಮಾ ಸಮಿತಿ ವರದಿ ಪ್ರಕಟವಾದ ಬೆನ್ನಲ್ಲೇ ಚಿತ್ರರಂಗದ ನಟಿಯರು ತಮ್ಮ ಮೇಲೆ ಲೈಂಕಿಗ ದೌರ್ಜನ್ಯ ಎಸಗಿದ ಚಿತ್ರರಂಗದ ನಟ, ನಿರ್ದೇಶಕರ ಹೆಸರು ಬಹಿರಂಗಪಡಿಸಿದರು. ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ನಟರಲ್ಲಿ ಮುಖೇಶ್ ಕೂಡ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News