800 ವರ್ಷ ಹಳೆಯ ಮಸೀದಿಯಲ್ಲಿ ನಮಾಝ್‌ ನಿರ್ಬಂಧಿಸಿದ ಜಿಲ್ಲಾಧಿಕಾರಿ ಆದೇಶಕ್ಕೆ ಬಾಂಬೆ ಹೈಕೋರ್ಟ್‌ ತಡೆಯಾಜ್ಞೆ

ಹೈಕೋರ್ಟ್‌ನ ಏಕಸದಸ್ಯ ಪೀಠ ನ್ಯಾಯಮೂರ್ತಿ ಆರ್.ಎಂ. ಜೋಶಿ ಜು.18ರ ಮಂಗಳವಾರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಎರಡು ವಾರಗಳ ತಡೆ ನೀಡಿದ್ದಾರೆ. ನ್ಯಾಯಾಲಯದ ಆದೇಶದಿಂದ ಜುಮ್ಮಾ ಮಸೀದಿ ಟ್ರಸ್ಟ್ ಮಸೀದಿಯ ಮೇಲೆ ಮತ್ತೆ ಹಿಡಿತ ಸಾಧಿಸಿದ್ದು, ಸಮುದಾಯದವರು ಮೊದಲಿನಂತೆ ನಮಾಝ್ ಮಾಡಲು ಪ್ರಾರಂಭಿಸಿದ್ದಾರೆ.

Update: 2023-07-18 17:50 GMT
Editor : Muad | Byline : ವಾರ್ತಾಭಾರತಿ

Photo: Thewire.in

ಮುಂಬೈ: 800 ವರ್ಷಗಳಷ್ಟು ಹಳೆಯದಾದ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ನಮಾಝ್ ಮಾಡದಂತೆ ಜಲಗಾಂವ್ ಜಿಲ್ಲಾಧಿಕಾರಿಗಳು ಅನಿಯಂತ್ರಿತವಾಗಿ ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ, ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಸಮುದಾಯದ ರಕ್ಷಣೆಗೆ ಬಂದಿದೆ.

ಹೈಕೋರ್ಟ್‌ನ ಏಕಸದಸ್ಯ ಪೀಠ ನ್ಯಾಯಮೂರ್ತಿ ಆರ್.ಎಂ. ಜೋಶಿ ಜು.18ರ ಮಂಗಳವಾರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಎರಡು ವಾರಗಳ ತಡೆ ನೀಡಿದೆ. ನ್ಯಾಯಾಲಯದ ಆದೇಶದಿಂದ ಜುಮ್ಮಾ ಮಸೀದಿ ಟ್ರಸ್ಟ್ ಮಸೀದಿಯ ಮೇಲೆ ಮತ್ತೆ ಹಿಡಿತ ಸಾಧಿಸಿದ್ದು, ಸಮುದಾಯದವರು ಮೊದಲಿನಂತೆ ನಮಾಝ್ ಮಾಡಲು ಪ್ರಾರಂಭಿಸಿದ್ದಾರೆ.

ಬಾಂಬೆ ಹೈಕೋರ್ಟ್‌ನ ಆದೇಶವನ್ನು ದೃಢಪಡಿಸಿದ ವಕೀಲ ಎಸ್.ಎಸ್. ಖಾಝಿ ಜುಮ್ಮಾ ಮಸೀದಿ ಟ್ರಸ್ಟ್ ಕಮಿಟಿಯನ್ನು ಪ್ರತಿನಿಧಿಸುತ್ತಿದ್ದು, ಅವರು ದಿ ವೈರ್‌ ಜೊತೆ ಮಾತನಾಡುತ್ತಾ, “ನ್ಯಾಯಾಲಯವು ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ವಿಧಿಸುವುದರ ಜೊತೆಗೆ ಮಸೀದಿಯ ಕೀಗಳನ್ನು ಟ್ರಸ್ಟ್ ಸಮಿತಿಗೆ ಹಸ್ತಾಂತರಿಸುವಂತೆ ಅವರ ಕಚೇರಿಗೆ ನಿರ್ದೇಶನ ನೀಡಿದೆ. ಮಸೀದಿ ಮತ್ತೊಮ್ಮೆ ಸಮುದಾಯಕ್ಕೆ ಮುಕ್ತವಾಗಲಿದೆ." ಎಂದು ಹೇಳಿದ್ದಾರೆ

ಜಲಗಾಂವ್‌ನ ಎರಂಡೋಲ್ ತಾಲೂಕಿನ ಜುಮ್ಮಾ ಮಸೀದಿ ವಕ್ಫ್ ಬೋರ್ಡ್ ಅಡಿಯಲ್ಲಿ ನೋಂದಾಯಿತ ಆಸ್ತಿಯಾಗಿದೆ. ಈ ವರ್ಷದ ಮೇ ವರೆಗೆ, ಮಸೀದಿಯು ಯಾವುದೇ ಹಸ್ತಕ್ಷೇಪವನ್ನು ಎದುರಿಸದೆ ಸುಗಮವಾಗಿ ನಡೆಸುತ್ತಿತ್ತು.

ಶತಮಾನಗಳಷ್ಟು ಹಳೆಯದಾದ ಮಸೀದಿಯು ಪಾಂಡವ್ವಾಡ ಸಂಘರ್ಷ ಸಮಿತಿ ಎಂಬ ನೋಂದಣಿಯಾಗದ ಸಂಘಟನೆಯು ಸಲ್ಲಿಸಿದ ದೂರಿನಿಂದಾಗಿ ಇದ್ದಕ್ಕಿದ್ದಂತೆ ವಿವಾದದ ತಾಣವಾಯಿತು. ದೂರುದಾರರಾದ ಪ್ರಸಾದ್ ಮಧುಸೂದನ್ ದಂಡವಟೆ ಅವರು ಮೇ ಮಧ್ಯದಲ್ಲಿ ಜಲಗಾಂವ್ ಜಿಲ್ಲಾಧಿಕಾರಿ ಅಮನ್ ಮಿತ್ತಲ್ ಅವರಿಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯ ದಂಡವಟೆ, ಮಸೀದಿಯನ್ನು ಹಿಂದೂ ಪೂಜಾ ಸ್ಥಳದ ಮೇಲೆ "ಕಾನೂನುಬಾಹಿರವಾಗಿ" ನಿರ್ಮಿಸಲಾಗಿದೆ ಮತ್ತು ಅದನ್ನು ರಾಜ್ಯ ಅಧಿಕಾರಿಗಳು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News