ಪುಣೆ ಲೆಕ್ಕಪರಿಶೋಧಕಿ ಸಾವಿನ ಕುರಿತು ಕೇಂದ್ರದಿಂದ ತನಿಖೆ

Update: 2024-09-19 16:44 GMT

ಅನ್ನಾ ಸೆಬಾಸ್ಟಿನ್ ಪೆರಾಯಿಲ್ | PC : X 

ಹೊಸದಿಲ್ಲಿ : ಸಂಸ್ಥೆಯಲ್ಲಿ ತೀವ್ರ ಕೆಲಸದ ಒತ್ತಡದಿಂದಾಗಿ 26ರ ಹರೆಯದ ಲೆಕ್ಕ ಪರಿಶೋಧಕಿಯ ಸಾವಿನ ಕುರಿತು ನಡೆಯತ್ತಿರುವ ಚರ್ಚೆಗಳ ನಡುವೆಯೇ ಕೇಂದ್ರ ಕಾರ್ಮಿಕ ಸಚಿವಾಲಯವು ಈ ಸಂಬಂಧ ಸಲ್ಲಿಸಲಾದ ದೂರಿನ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡಿದೆ.

‘ಇದು ತುಂಬ ದುಃಖಕರವಾಗಿದೆ, ಆದರೆ ಹಲವಾರು ಹಂತಗಳಲ್ಲಿ ಗೊಂದಲವನ್ನೂ ಉಂಟು ಮಾಡುತ್ತಿದೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು,ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುವಂತೆ ಕಾರ್ಮಿಕ ಸಚಿವಾಲಯವನ್ನು ಆಗ್ರಹಿಸಿದ್ದಾರೆ.

ಅನ್ನಾ ಸೆಬಾಸ್ಟಿನ್ ಪೆರಾಯಿಲ್ ಅವರ ಜೀವವನ್ನು ಕಿತ್ತುಕೊಂಡಿರುವ ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಕುರಿತು ಅವರ ತಾಯಿ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಭಾರತ ಸರಕಾರ, ಮನ್ಸುಖ್ ಮಾಂಡವೀಯ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಆಗ್ರಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಹಾಯಕ ಎಂಎಸ್‌ಎಂಇ, ಕಾರ್ಮಿಕ ಮತ್ತುಉದ್ಯೋಗ ಸಚಿವೆ ಶೋಭಾ ಕರಂದ್ಲಾಜೆ ಅವರು, ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ನಾಲ್ಕು ತಿಂಗಳುಗಳ ಹಿಂದಷ್ಟೇ ಪುಣೆಯ ಅರ್ನಸ್ಟ್ ಆ್ಯಂಡ್ ಯಂಗ್(ಈವೈ) ಕಂಪನಿಗೆ ಸೇರಿದ್ದ ಅನ್ನಾ ಕೆಲಸದ ತೀವ್ರ ಒತ್ತಡ ಮತ್ತು ಹೊರೆಯಿಂದಾಗಿ ಜೀವವನ್ನು ಕಳೆದುಕೊಂಡಿದ್ದಾರೆ ಅವರ ತಾಯಿ ಆರೋಪಿಸಿದ್ದಾರೆ.

ಆರೋಪಕ್ಕೆ ಪ್ರತಿಕ್ರಿಯಿಸಿರುವ ಈವೈ, ದೇಶಾದ್ಯಂತ ತನ್ನ ಕಚೇರಿಗಳಲ್ಲಿ ಆರೋಗ್ಯಕರ ಮತು ಪೂರಕ ಕೆಲಸದ ಸ್ಥಳವನ್ನು ಒದಗಿಸುವುದ್ನು ತಾನು ಮಂದುವರಿಸುತ್ತೇನೆ ಎಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News