ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ | ಭಾರತದ ವೇಟ್‌ಲಿಫ್ಟರ್ ವಲ್ಲೂರಿ ಅಜಯ್ ಬಾಬುಗೆ ಚಿನ್ನ

Update: 2024-09-19 16:00 GMT

ವಲ್ಲೂರಿ ಅಜಯ್ ಬಾಬು | PC : FACE BOOK \ Department of Sports and Youth Services, Government of Odisha

ಹೊಸದಿಲ್ಲಿ : ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನ ಪುರುಷರ 81 ಕೆಜಿ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಭಾರತೀಯ ವೇಟ್‌ಲಿಫ್ಟರ್ ವಲ್ಲೂರಿ ಅಜಯ್ ಬಾಬು ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಫಿಜಿಯ ಸುವಾದಲ್ಲಿ ಗುರುವಾರ ನಡೆದ ಸ್ಪರ್ಧೆಯಲ್ಲಿ 19ರ ಹರೆಯದ ಬಾಬು ಒಟ್ಟು 326 ಕೆಜಿ(147ಕೆಜಿ+179ಕೆಜಿ)ಎತ್ತಿ ಹಿಡಿದು ಮೊದಲ ಸ್ಥಾನ ಪಡೆದರು. ಈ ಪ್ರದರ್ಶನದ ಮೂಲಕ ಬಾಬು ಅವರು 81 ಕೆಜಿ ಜೂನಿಯರ್ ವಿಭಾಗದ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ಕಾಮನ್‌ವೆಲ್ತ್ ದಾಖಲೆ ನಿರ್ಮಿಸಿದರು. ಅಜಯ್ ಬಾಬು ಅವರು ಸ್ನ್ಯಾಚ್, ಕ್ಲೀನ್ ಹಾಗೂ ಜರ್ಕ್ ಹಾಗೂ ಒಟ್ಟು ತೂಕ ವಿಭಾಗಗಳಲ್ಲಿ ಜೂನಿಯರ್ ರಾಷ್ಟ್ರೀಯ ದಾಖಲೆ ಮುರಿದರು.

ಅಜಯ್ ಸಹ ಸ್ಪರ್ಧಿ ಸಾಯಿರಾಜ್ ಪರ್ದೇಶಿ 81 ಕೆಜಿ ವಿಭಾಗದಲ್ಲಿ ಯೂತ್ ಗೋಲ್ಡ್ ಗೆದ್ದರು. ಜೂನಿಯರ್ ವಿಭಾಗದಲ್ಲಿ ಬಾಬು ನಂತರ ಎರಡನೇ ಸ್ಥಾನ ಪಡೆದರು.

ಲಾಲ್‌ರುಯಾತ್‌ಫೆಲಾ ಪುರುಷರ 89 ಕೆಜಿ ಸ್ಪರ್ಧೆಯಲ್ಲಿ 301 ಕೆಜಿ(135+166ಕೆಜಿ)ಎತ್ತಿ ಹಿಡಿದು ಬೆಳ್ಳಿ ಪದಕ ಜಯಿಸಿದರು. ಹೃದಾನಂದ ದಾಸ್ ಒಟ್ಟು 299 ಕೆಜಿ(129+170ಕೆಜಿ)ಎತ್ತಿ ಹಿಡಿದು ಯೂತ್ ವಿಭಾಗದಲ್ಲಿ ಬೆಳ್ಳಿ ಹಾಗೂ ಜೂನಿಯರ್ ವಿಭಾಗದಲ್ಲಿ ಕಂಚು ಜಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News