ಮಧ್ಯಪ್ರದೇಶ |ಭೋಪಾಲ್ ನ ವನವಿಹಾರ್ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಳಿ ಹುಲಿ ‘ರಿದ್ಧಿ’ ಮೃತ್ಯು

Update: 2024-09-19 15:47 GMT

   ಸಾಂದರ್ಭಿಕ ಚಿತ್ರ 

ಭೋಪಾಲ್ : ಭೋಪಾಲ್ ನ ವನ್ ವಿಹಾರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಂದರ್ಶಕರ ಪಾಲಿಗೆ ಪ್ರಮುಖ ಆಕರ್ಷಣೆಯಾಗಿದ್ದ 15 ವರ್ಷದ ಬಿಳಿ ಹುಲಿ ‘ರಿದ್ಧಿ’ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ ಎಂದು ಗುರುವಾರ ಪಶು ವೈದ್ಯರೊಬ್ಬರು ತಿಳಿಸಿದ್ದಾರೆ.

ರಿದ್ಧಿ ಬಿಳಿ ಹುಲಿಯನ್ನು ಅದು ನಾಲ್ಕು ವರ್ಷ ವಯಸ್ಸಿನದಾಗಿದ್ದಾಗ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಇಂದೋರ್ ಮೃಗಾಲಯದಿಂದ ವನ್ ವಿಹಾರ್ ರಾಷ್ಟ್ರೀಯ ಉದ್ಯಾನವನಕ್ಕೆ ಕರೆ ತರಲಾಗಿತ್ತು.

ಈಗ 15 ವರ್ಷ ವಯಸ್ಸಾಗಿದ್ದ ರಿದ್ಧಿಯನ್ನು ಪಂಜರದಲ್ಲಿರಿಸಲಾಗಿತ್ತು ಹಾಗೂ ಉದ್ಯಾನವನಕ್ಕೆ ಭೇಟಿ ನೀಡುವವರ ಪಾಲಿಗದು ಪ್ರಮುಖ ಆಕರ್ಷಣೆಯಾಗಿತ್ತು.

ಮೇಲ್ನೋಟಕ್ಕೆ ರಿದ್ಧಿ ಹುಲಿಯು ಆಂತರಿಕ ಅಂಗಾಂಗಗಳ ವೈಫಲ್ಯದಿಂದ ಮೃತಪಟ್ಟಿರುವಂತೆ ತೋರುತ್ತಿದೆ ಎಂದು ಉದ್ಯಾನವನದ ವನ್ಯಜೀವಿ ಪಶು ವೈದ್ಯ ಅತುಲ್ ಗುಪ್ತ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News