ಗೋವಾ: ಮಗುವನ್ನು ಅಪಹರಿಸಿ ಸುಲಿಗೆಗೆ ಯತ್ನಿಸಿದ ಪೊಲೀಸ್, ಜೀವರಕ್ಷಕನ ಬಂಧನ

Update: 2024-09-01 06:30 GMT

ಪಣಜಿ: ಉತ್ತರ ಗೋವಾದ ಪೆರ್ನೆಮ್‌ನಲ್ಲಿ ಸುಲಿಗೆಗಾಗಿ ಒಂದೂವರೆ ವರ್ಷದ ಬಾಲಕನನ್ನು ಅಪಹರಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಮತ್ತು ಜೀವರಕ್ಷಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

ರಾಜ್ಯ ಪೊಲೀಸ್‌ನ ಇಂಡಿಯಾ ರಿಸರ್ವ್ ಬೆಟಾಲಿಯನ್‌ಗೆ ಲಗತ್ತಿಸಲಾದ ಕಾನ್‌ಸ್ಟೆಬಲ್ ನಿಕೇಶ್ ಚಾರಿ ಮತ್ತು ದೃಷ್ಟಿ ಮರಿನ್‌ನ ಜೀವರಕ್ಷಕ ಸಂಜಯ್ ನಾರೆವ್ಕರ್ ಅವರನ್ನು ಶನಿವಾರ ಕಾರ್ಗೋವ್ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳವಿ ತಿಳಿಸಿದ್ದಾರೆ.

"ಶುಕ್ರವಾರ ರಾತ್ರಿ ತನ್ನ ಮನೆಯಲ್ಲಿ ಆಟವಾಡುತ್ತಿದ್ದ ಮಗುವನ್ನು ಆರೋಪಿಗಳು ಅಪಹರಿಸಲು ಪ್ರಯತ್ನಿಸಿದರು. ಇಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಮಗುವನ್ನು ಎತ್ತಿಕೊಳ್ಳಲು ಪ್ರಯತ್ನಿಸುವಾಗ ಮಗುವಿನ ಅಜ್ಜ ಕೂಗಿಕೊಂಡರು. ಕೂಡಲೇ ನೆರೆಹೊರೆಯವರು ಅಲ್ಲಿಗೆ ಧಾವಿಸಿ ಅವರು ಪೊಲೀಸ್ ಕಾನ್ಸ್ಟೇಬಲ್ ಚಾರಿಯನ್ನು ಹಿಡಿದರು. ಅದರೆ ನಾರ್ವೇಕರ್ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

"ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೆಂಗುರ್ಲಾ ಮೂಲದ ನಾರ್ವೇಕರ್ ನನ್ನು ನಂತರ ಬಂಧಿಸಲಾಯಿತು. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಗೋವಾ ಮಕ್ಕಳ ಕಾಯ್ದೆಯಡಿ ಅಪಹರಣ ಮತ್ತು ಇತರ ಅಪರಾಧಗಳ ಆರೋಪಗಳನ್ನು ಹೊರಿಸಲಾಗಿದೆ. ಆರೋಪಿಗಳು ಮಗುವಿನ ಪೋಷಕರಿಂದ ಹಣವನ್ನು ಸುಲಿಗೆ ಮಾಡಲು ಯೋಜಿಸಿದ್ದರು," ಎಂದು ಉಪ ಎಸ್ಪಿ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News