ಗುಜರಾತ್: ಕುದುರೆ ಸವಾರಿ ಮಾಡಿ ಮೆರವಣಿಗೆಯಲ್ಲಿ ಸಾಗಿದ ದಲಿತ ವರನಿಗೆ ಜಾತಿನಿಂದನೆ ಮಾಡಿ ಹಲ್ಲೆ

Update: 2024-02-14 12:10 GMT

(Photo:X/@ambedkariteIND)

ಗಾಂಧಿನಗರ್: ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ಮದುಮಗನಿಗೆ ಥಳಿಸಿದ ಆರೋಪದ ಮೇಲೆ ಗುಜರಾತ್‌ನ ಗಾಂಧಿನಗರದಲ್ಲಿ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಚಡಸನ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮದುಮಗ ವಿಕಾಸ್‌ ಚಾವ್ಡ ಕುದುರೆ ಸವಾರಿ ಮಾಡುವುದನ್ನು ನೋಡಿ ಆತನಿಗೆ ಕೆಲವರು ಜಾತಿನಿಂದನೆ ಮಾಡಿದ್ದರೆಂದು ಆರೋಪಿಸಲಾಗಿದೆ.

ಸುಮಾರು 100 ಜನರಿದ್ದ ಮೆರವಣಿಗೆ ವಧುವಿನ ಮನೆಯತ್ತ ಸಾಗುತ್ತಿದ್ದಾಗ ಮೋಟಾರ್‌ಸೈಕಲ್‌ ಸವಾರಿ ಮಾಡುತ್ತಾ ಬಂದ ಒಬ್ಬ ವ್ಯಕ್ತಿ ಮದುಮಗನನ್ನು ತಡೆದು ಕುದುರೆಯಿಂದ ಕೆಳಗಿಳಿಸಿ ಆತನಿಗೆ ಕಪಾಳಮೋಕ್ಷಗೈದರೆ, ನಂತರ ಇತರ ಮೂವರು ಆಗಮಿಸಿ ನಿಂದಿಸಿ, ಬೆದರಿಸಿದ್ದು, ನಂತರ ವರ ಅನಿವಾರ್ಯವಾಗಿ ಬೇರೆ ವಾಹನದಲ್ಲಿ ವಧುವಿನ ಮನೆಗೆ ತೆರಳಿದರೆಂದು ಆತನ ಸೋದರಸಂಬಂಧಿ ಸಂಜಯ್‌ ಚಾವ್ಡ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಬಂಧಿತರನ್ನು ಶೈಲೇಶ್‌ ಠಾಕುರ್‌, ಜಯೇಶ್‌ ಠಾಕುರ್‌, ಸಮೀರ್‌ ಠಾಕುರ್‌ ಮತ್ತು ಅಶ್ವಿನ್‌ ಠಾಕುರ್‌ ಎಂದು ಗುರುತಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News