ದಿಲ್ಲಿ | ತೀವ್ರಗೊಂಡ ವಾಯುಮಾಲಿನ್ಯ, ಜನರಿಗೆ ಉಸಿರಾಟದ ತೊಂದರೆ

Update: 2024-11-03 15:35 GMT

PC : PTI 

ಹೊಸದಿಲ್ಲಿ : ರವಿವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯ ಭಾಗಗಳನ್ನು ಹೊಗೆಯ ತೆಳುವಾದ ಹೊದಿಕೆಯು ಆವರಿಸಿಕೊಂಡಿದ್ದು, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ಅತ್ಯಂತ ಕಳಪೆ’ ವರ್ಗದಲ್ಲಿ ಮುಂದುವರಿದಿದೆ.

ನಗರದ ಹೆಚ್ಚಿನ ಭಾಗಗಳಲ್ಲಿ 350ಕ್ಕಿಂತ ಹೆಚ್ಚಿನ ಎಕ್ಯೂಐ ದಾಖಲಾಗಿದ್ದು,ನಿವಾಸಿಗಳ ಆರೋಗ್ಯದ ಬಗ್ಗೆ ಕಳವಳಗಳನ್ನು ಹೆಚ್ಚಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಪ್ರಕಾರ ರವಿವಾರ ಬೆಳಿಗ್ಗೆ ಏಳು ಗಂಟೆಗೆ ದಿಲ್ಲಿಯಲ್ಲಿ 364ರಷ್ಟು ಸರಾಸರಿ ಎಕ್ಯೂಐ ದಾಖಲಾಗಿತ್ತು.

ನೆಹರು ನಗರ ಮತ್ತು ಆನಂದ ವಿಹಾರದಲ್ಲಿ ಎಕ್ಯೂಐ 431 ಮತ್ತು 427ರ ಮಟ್ಟವನ್ನು ತಲುಪಿದ್ದು, ಈ ಪ್ರದೇಶಗಳು ‘ಗಂಭೀರ’ ವರ್ಗದಲ್ಲಿ ಮುಂದುವರಿದಿವೆ.

‘ಉಸಿರಾಡಲು ಕಷ್ಟವಾಗುತ್ತಿದೆ. ಇದು ನಾವು ಹೊರಗೆ ಹೋಗಲು ಮತ್ತು ವ್ಯಾಯಾಮ ಮಾಡಲು ಇದು ಸಮಯವಲ್ಲ. ವಾಯುಮಾಲಿನ್ಯ ನಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತಿದೆ ’ಎಂದು ದಿಲ್ಲಿ ನಿವಾಸಿ ಆದಿತ್ಯ ಹೇಳಿದರು.

ಈ ನಡುವೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದಿಲ್ಲಿಯ ಪರಿಸರ ಸಚಿವ ಗೋಪಾಲ ರಾಯ್ ಅವರು, ‘ಧೂಳಿನ ಮಾಲಿನ್ಯವನ್ನು ಎದುರಿಸಲು ರಾಷ್ಟ್ರ ರಾಜಧಾನಿಯಾದ್ಯಂತ ಸುಮಾರು 200 ಮೊಬೈಲ್ ಆ್ಯಂಟಿ-ಸ್ಮಾಗ್ ಗನ್‌ಗಳನ್ನು ನಿಯೋಜಿಸಲಾಗುತ್ತಿದೆ. ಹೆಚ್ಚುತ್ತಿರುವ ಮಾಲಿನ್ಯ ಮಟ್ಟದ ವಿರುದ್ಧ ದಿಲ್ಲಿ ಸರಕಾರವು ನಿರಂತರವಾಗಿ ಶ್ರಮಿಸುತ್ತಿದೆ. ಧೂಳು ಮಾಲಿನ್ಯ,ವಾಹನ ಮಾಲಿನ್ಯ ಅಥವಾ ಬೆಳೆ ಅವಶೇಷಗಳ ಸುಡುವಿಕೆಯ ಮಾಲಿನ್ಯವಾಗಲಿ, ಇವುಗಳನ್ನು ಗುರಿಯಾಗಿಸಿಕೊಂಡು ನಮ್ಮ ತಂಡಗಳು ನಿರಂತರವಾಗಿ ಕಾರ್ಯಾಚರಿಸುತ್ತಿವೆ ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News