ಬಿಜೆಪಿಯಿಂದ ಮಾನನಷ್ಟ ಮೊಕದ್ದಮೆ: ಸಚಿವೆ ಅತಿಶಿಗೆ ದಿಲ್ಲಿ ಕೋರ್ಟ್ ಸಮನ್ಸ್

Update: 2024-05-28 15:37 GMT

Photo Credit: PTI

ಹೊಸದಿಲ್ಲಿ: ಬಿಜೆಪಿಯು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆಯೆಂದು ಆಪಾದಿಸಿದ್ದ ಆಮ್ ಆದ್ಮಿ ಪಕ್ಷ (ಆಪ್)ದ ನಾಯಕ ಆತಿಶಿ ಮಾರ್ಲೆನಾ ಅವರಿಗೆ ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ಸಮನ್ಸ್ ಜಾರಿಗೊಳಿಸಿದೆ. ಬಿಜೆಪಿ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆಂದು ದೂರಿ, ಅತಿಶಿ ವಿರುದ್ಧ ದಿಲ್ಲಿ ಬಿಜೆಪಿ ಮಾಧ್ಯಮ ವಿಭಾಗದ ವರಿಷ್ಠ ಪ್ರವೀಣ್ ಶಂರ್ ಕಪೂರ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಜೂನ್ 29ರಂದು ತನ್ನ ಮುಂದೆ ಹಾಜರಾಗುವಂತೆ ನ್ಯಾಯಾಲಯವು ಅತಿಶಿ ಅವರಿಗೆ ಸಮನ್ಸ್ ನೀಡಿದೆ.

ಬಿಜೆಪಿಯನ್ನು ಸೇರುವಂತೆ ನಿಕಟವರ್ತಿಯಬ್ಬರ ಮೂಲಕ ತನ್ನನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದರು ಎಂದು ಆಪ್ ನಾಯಕಿಯಾದ ಅತಿಶಿ ಕಳೆದ ತಿಂಗಳು ಆಪಾದಿಸಿದ್ದರು. ಇದನ್ನು ವಿರೋಧಿಸಿ ಈ ತಿಂಗಳ ಆರಂಭದಲ್ಲಿ ಅವರಿಗೆ ಬಿಜೆಪಿಯ ದಿಲ್ಲಿ ಘಟಕವು ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿತ್ತು.

ಕಾನೂನುಬಾಹಿರ ವಿಧಾನಗಳ ಮೂಲಕ ದಿಲ್ಲಿಯ ಆಪ್ ಸರಕಾರವನ್ನು ಉರುಳಿಸಲು ಬಿಜೆಪಿಯು ಯತ್ನಿಸುತ್ತಿದೆಯೆಂಬಂತೆ ಬಿಂಬಿಸಲು ಆಪ್ ನಾಯಕರು ಯತ್ನಿಸುತ್ತಿದ್ದಾರೆಂದು ತಿವಾರಿ ತಿಳಿಸಿದರು.

ಕೆಲವು ನಿರ್ದಿಷ್ಟ ಆಪ್ ಶಾಸಕರ ಖರೀದಿಗಾಗಿ 20-30 ಕೋಟಿ ರೂ. ನೀಡುವುದಾಗಿ ಬಿಜೆಪಿಯು ತಮಗೆ ಆಮಿಷವೊಡ್ಡಿರುವುದಾಗಿ ಆಪ್ ನಾಯಕರು ಆಪಾದಿಸಿದ್ದರು.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಆಪ್ ನಾಯಕರಿಗೆ ಎದುರಾದಾಗಲೆಲ್ಲಾ ಅವರು ಆಧಾರರಹಿತ ಆರೋಪಗಳನ್ನು ಮಾಡುತ್ತಾರೆ ಹಾಗೂ ತಾವು ಬಲಿಪಶುಗಳೆಂಬಂತೆ ಬಿಂಬಿಸಿಕೊಳ್ಳುತ್ತಾರೆ. ಈ ಮೂಲಕ ಅವರು ಬಿಜೆಪಿಯ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡಿದ್ದಾರೆಂದು ತಿವಾರಿ ಮಾನನಷ್ಟ ದಾವೆಯಲ್ಲಿ ಆಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News