ಆದಾಯ ಮರುಮೌಲ್ಯಮಾಪನದ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
Update: 2024-03-28 09:38 GMT
ಹೊಸದಿಲ್ಲಿ: ನಾಲ್ಕು ವರ್ಷಗಳ ಅವಧಿಯ ಆದಾಯ ಮರು ಮೌಲ್ಯಮಾಪನ ಪ್ರಕ್ರಿಯೆಗೆ ಮುಂದಾಗಿರುವ ಆದಾಯ ತೆರಿಗೆ ಇಲಾಖೆಯ ಉಪಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ.
ಮತ್ತೊಂದು ವರ್ಷದ ಮರು ಮೌಲ್ಯಮಾಪನ ಆರಂಭದ ನಡುವೆ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ತನ್ನ ಈ ಮುಂಚಿನ ನಿರ್ಧಾರದ ಆಧಾರದಲ್ಲಿ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ನ್ಯಾ. ಯಶವಂತ್ ವರ್ಮ ಹಾಗೂ ಪುರುಷೈಂದ್ರ ಕುಮಾರ್ ಕೌರವ್ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿತು.
ಹಾಲಿ ವಿಷಯವು 2017ರಿಂದ 2021ರ ನಡುವಿನ ಮರು ಮೌಲ್ಯಮಾಪನಕ್ಕೆ ಸಂಬಂಧಿಸಿದ್ದಾಗಿದೆ.
2014-15ರಿಂದ 2016-17ರ ನಡುವಿನ ವರ್ಷಗಳ ಆದಾಯ ಮರು ಮೌಲ್ಯಮಾಪನ ಪ್ರಕ್ರಿಯೆಯ ಉಪಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಈ ಮುಂಚಿನ ಅರ್ಜಿಯನ್ನು ಕಳೆದ ವಾರ ವಜಾಗೊಳಿಸಲಾಗಿತ್ತು.