ರಣಜಿ: ಕರ್ನಾಟಕದ ವಿರುದ್ಧ ಬಂಗಾಳ ಮೇಲುಗೈ | ಇಶಾನ್ ಪೊರೆಲ್‌ಗೆ 4 ವಿಕೆಟ್

Update: 2024-11-08 15:41 GMT

ಇಶಾನ್ ಪೊರೆಲ್ | PTI 

ಬೆಂಗಳೂರು : ಕರ್ನಾಟಕ ಕ್ರಿಕೆಟ್ ತಂಡದ ವಿರುದ್ಧ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದ 3ನೇ ದಿನದಾಟವಾದ ಶುಕ್ರವಾರ ಬಂಗಾಳ ತಂಡ ಉತ್ತಮ ಸ್ಥಿತಿಯಲ್ಲಿದೆ.

ಬಂಗಾಳದ ವೇಗದ ಬೌಲರ್ ಇಶಾನ್ ಪೊರೆಲ್(4-54) ಬೆಳಗ್ಗಿನ ಅವಧಿಯಲ್ಲಿ ಕ್ಷಿಪ್ರಗತಿಯಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸಿ ಕರ್ನಾಟಕ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 221 ರನ್‌ಗೆ ಆಲೌಟ್ ಮಾಡಿದರು.

ಮೊದಲ ಇನಿಂಗ್ಸ್‌ನಲ್ಲಿ 80 ರನ್ ಮುನ್ನಡೆ ಪಡೆದಿರುವ ಬಂಗಾಳ ತಂಡ 2ನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 127 ರನ್ ಗಳಿಸಿದ್ದು, ಒಟ್ಟಾರೆ 207 ರನ್ ಮುನ್ನಡೆಯಲ್ಲಿದೆ. ಶನಿವಾರ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ. ಸುದೀಪ್ ಚಟರ್ಜಿ(48 ರನ್)ಹಾಗೂ ಶಿವಂ ಡೇ(30 ರನ್)ಮೊದಲ ವಿಕೆಟ್‌ಗೆ 69 ರನ ಸೇರಿಸಿದರು. ಸುದೀಪ್ ಕುಮಾರ್(25)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಶುಕ್ರವಾರ 5 ವಿಕೆಟ್‌ಗಳ ನಷ್ಟಕ್ಕೆ 155 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತಂಡದ ಪರ ಅಭಿನವ್ ಮನೋಹರ್(55 ರನ್, 103 ಎಸೆತ)ಹಾಗೂ ಶ್ರೇಯಸ್ ಗೋಪಾಲ್(28 ರನ್, 63 ಎಸೆತ)6ನೇ ವಿಕೆಟ್‌ಗೆ 65 ರನ್ ಜೊತೆಯಾಟ ನಡೆಸಿದರು. ಪೊರೆಲ್ ಈ ಜೋಡಿಯನ್ನು ಬೇರ್ಪಡಿಸಿದರು. ವಿದ್ಯಾಧರ ಪಾಟೀಲ್(33 ರನ್, 61 ಎಸೆತ)ಕೆಳ ಕ್ರಮಾಂಕದಲ್ಲಿ ಸ್ವಲ್ಪ ಹೋರಾಟ ನೀಡಿದರು.

ಬಂಗಾಳದ ಪರ ಪೊರೆಲ್ ಯಶಸ್ವಿ ಪ್ರದರ್ಶನ ನೀಡಿದರೆ, ಸೂರಜ್ ಸಿಂಧು(3-65)ಹಾಗೂ ರಿಶಾವ್ ವಿವೇಕ್(2-46)ಐದು ವಿಕೆಟ್ ಹಂಚಿಕೊಂಡರು.

►ಸಂಕ್ಷಿಪ್ತ ಸ್ಕೋರ್

ಬಂಗಾಳ ಮೊದಲ ಇನಿಂಗ್ಸ್: 301

ಕರ್ನಾಟಕ ಮೊದಲ ಇನಿಂಗ್ಸ್: 221

ಬಂಗಾಳ 2ನೇ ಇನಿಂಗ್ಸ್: 127/5

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News