ನೋಯ್ಡಾ | ಫುಟ್‌ ಪಾತ್‌ನಲ್ಲಿ ಇಬ್ಬರು ಕಾರ್ಮಿಕರಿಗೆ ಡಿಕ್ಕಿ ಹೊಡೆದು "ಯಾರಾದರೂ ಸತ್ತಿದ್ದಾರೆಯೇ?" ಎಂದು ಕೇಳಿದ ಲ್ಯಾಂಬೋರ್ಗಿನಿ ಚಾಲಕ!

Update: 2025-03-30 22:07 IST
ನೋಯ್ಡಾ | ಫುಟ್‌ ಪಾತ್‌ನಲ್ಲಿ ಇಬ್ಬರು ಕಾರ್ಮಿಕರಿಗೆ ಡಿಕ್ಕಿ ಹೊಡೆದು "ಯಾರಾದರೂ ಸತ್ತಿದ್ದಾರೆಯೇ?" ಎಂದು ಕೇಳಿದ ಲ್ಯಾಂಬೋರ್ಗಿನಿ ಚಾಲಕ!

Photo : X

  • whatsapp icon

ನೋಯ್ಡಾ: ನೋಯ್ಡಾದ ಸೆಕ್ಟರ್ 94 ರಲ್ಲಿ ನಿರ್ಮಾಣ ಹಂತದಲ್ಲಿರುವ ಸಂಕೀರ್ಣದ ಪಕ್ಕದಲ್ಲಿರುವ ಫುಟ್‌ ಪಾತ್‌ನಲ್ಲಿ ರವಿವಾರ ಸಂಜೆ ಲ್ಯಾಂಬೋರ್ಗಿನಿ ಕಾರು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ.

ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಅದರೆಡೆಗೆ ಧಾವಿಸಿದ ಕಾರ್ಮಿಕರು ನೀವು ಭಾರೀ ಸ್ಟಂಟ್ ಮಾಡುವುದುನ್ನು ಕಲಿತಿದ್ದೀರಿ. ಎಷ್ಟು ಜನರು ಮೃತಪಟ್ಟಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಎಂದು ಕೇಳುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಅದಕ್ಕೆ ಚಾಲಕ ಇಲ್ಲಿ ಯಾರಾದರೂ ಸತ್ತಿದ್ದಾರೆಯೇ ಎಂದು ಅಸಡ್ಡೆಯಿಂದ ಕೇಳುತ್ತಿರುವುದು ವೀಡಿಯೊದಲ್ಲಿ ಕಾಣುತ್ತಿದೆ.

ಗಾಯಗೊಂಡಿದರು ಕಾರ್ಮಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರೆಲ್ಲ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿ ಹೊಡೆದಿರುವ ಕಾರು ಪುದುಚೇರಿ ನೋಂದಣಿ ಹೊಂದಿತ್ತು. ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News