ಡೆಸ್ಪಾಂಗ್ ಮತ್ತು ಡೆಮ್‌ಚೋಕ್‌ ನಿಂದ ಸೇನೆ ವಾಪಸಾತಿ ಮೊದಲ ಹೆಜ್ಜೆ, ಉದ್ವಿಗ್ನತೆ ಶಮನ ಮುಂದಿನದು : ಚೀನಾ ಕುರಿತು ಜೈಶಂಕರ್

Update: 2024-10-27 15:31 GMT

ಎಸ್.ಜೈಶಂಕರ್ | PC : PTI 

ಮುಂಬೈ : ಲಡಾಖ್‌ನ ಡೆಸ್ಪಾಂಗ್ ಹಾಗೂ ಡೆಮ್‌ಚೋಕ್‌ ನಿಂದ ಸೈನಿಕರ ವಾಪಸಾತಿ ಮೊದಲ ಹೆಜ್ಜೆಯಾಗಿದೆ ಮತ್ತು ಭಾರತವು 2020ರ ಗಸ್ತು ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ರವಿವಾರ ಇಲ್ಲಿ ಹೇಳಿದರು.

ಉದ್ವಿಗ್ನತೆ ಶಮನ ಮುಂದಿನ ಹೆಜ್ಜೆಯಾಗಿದೆ. ಆದರೆ ಗಡಿಯಾಚೆಯೂ ಅದು ನಡೆಯುತ್ತಿದೆ ಎನ್ನುವುದು ಭಾರತಕ್ಕೆ ಖಚಿತವಾಗುವವರೆಗೂ ಅದು ಸಂಭವಿಸುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಚೀನಾವನ್ನು ಉಲ್ಲೇಖಿಸಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್ , ‘ಡೆಸ್ಪಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ಗಸ್ತು ನಿರ್ವಹಣೆ ಮತ್ತು ಸೇನಾ ವಾಪಸಾತಿಯ ಕುರಿತು ಉಭಯ ದೇಶಗಳು ಒಮ್ಮತಕ್ಕೆ ಬಂದಿವೆ. ಇದನ್ನು ಕಾರ್ಯಗತಗೊಳಿಸುವುದು ಸಮಯವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಪರಸ್ಪರ ತುಂಬ ಸನಿಹಕ್ಕೆ ಬಂದಿದ್ದ ನಮ್ಮ ಸೇನೆಗಳು ಈಗ ತಮ್ಮ ನೆಲೆಗಳಿಗೆ ವಾಪಸಾಗುತ್ತಿವೆ. 2020ರಲ್ಲಿದ್ದ ಸ್ಥಿತಿ ಮರಳುತ್ತದೆ ಎಂದು ನಾವು ಆಶಿಸಿದ್ದೇವೆ ’ ಎಂದು ಹೇಳಿದರು.

ಉದ್ವಿಗ್ನತೆ ಶಮನದ ಬಳಿಕ ಗಡಿಗಳ ನಿರ್ವಹಣೆ ಕುರಿತು ಚರ್ಚಿಸಲಾಗುವುದು ಎಂದರು.

 

 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News