ಆಕಾಶವಾಣಿ, ಡಿಡಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳಿಗೆ ಡಿಜಿಟಲ್ ವೋಚರ್ ಗಳ ವಿತರಣೆ

Update: 2023-07-19 16:11 GMT

Photo-Twitter/@AkashvaniAIR | Photo; Doordarshan\ wikipedia

ಹೊಸದಿಲ್ಲಿ: ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಚುನಾವಣಾ ಪ್ರಚಾದ ಸಮಯಕ್ಕಾಗಿ ರಾಜಕೀಯ ಪಕ್ಷಗಳಿಗೆ ಭೌತಿಕ ವೋಚರ್ಗಳನ್ನು ನೀಡುವ ಬದಲು ಇನ್ನು ಮುಂದೆ ಅವುಗಳಿಗೆ ಮಾಹಿತಿ ತಂತ್ರಜ್ಞಾನ (IT) ವೇದಿಕೆ ಮೂಲಕ ಡಿಜಿಟಲ್ ರೂಪದ ಟೈಮ್ ವೋಚರ್ಗಳನ್ನು ವಿತರಿಸಲಾಗುವುದು.

‘‘ಈ ನಡೆಯು ಚುನಾವಣಾ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ಆಯೋಗವು ಹೊಂದಿರುವ ಬದ್ಧತೆಯನ್ನು ಸೂಚಿಸುತ್ತದೆ’’ ಚುನಾವಣಾ ಆಯೋಗವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈವರೆಗೆ ರಾಜಕೀಯ ಪಕ್ಷಗಳು ದೂರದರ್ಶನ ಹಾಗೂ ಆಕಾಶವಾಣಿಯಲ್ಲಿ ತಮ್ಮ ಚುನಾವಣಾ ಪ್ರಚಾರಕ್ಕೆ ಬೇಕಾದ ಟೈಮ್ ವೋಚರ್ಗಳನ್ನು ಪಡೆಯಲು ಚುನಾವಣಾ ಆಯೋಗದ ಕಚೇರಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಬೇಕಿತ್ತು.

ಸರಕಾರಿ ಸ್ವಾಮ್ಯದ ಪ್ರಸಾರಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ಸಮಯವನ್ನು ಹಂಚಿಕೆ ಮಾಡುವ ಯೋಜನೆಗೆ 1998ರಲ್ಲಿ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 39ಎ ಆಧಾರದಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಚಾಕ್ಕೆ ಸರಕಾರಿ ಸ್ವಾಮ್ಯದ ಇಲೆಕ್ಟ್ರಾನಿಕ್ಮಾಧ್ಯಮಗಳಲ್ಲಿ ಸಮಾನವಾದ ಅವಕಾಶ ಲಭಿಸುವುದನ್ನು ಖಾತರಿಪಡಿಸಲು ಈ ಕ್ರಮವನ್ನು ಕೈಗೊಳ್ಳಲಾಗಿತ್ತು.

ಈ ಯೋಜನೆಯಡಿ ಪ್ರತಿಯೊಂದು ರಾಷ್ಟ್ರೀಯ ಪಕ್ಷ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸಮಾನವಾದ ಮೂಲ ಸಮಯ (ಬೇಸ್ಟೈಮ್) ವನ್ನು ವಿತರಿಸಲಾಗುತ್ತದೆ. ಹಿಂದಿನ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಿರ್ವಹಣೆಯ ಆಧಾರದಲ್ಲಿ ಅವುಗಳಿಗೆ ಹೆಚ್ಚುವರಿ ಸಮಯಾವಕಾಶವನ್ನು ನೀಡಲು ನಿರ್ಧರಿಸಲಾಗುತ್ತದೆ.

ಯಾವುದೇ ಪಕ್ಷದ ಪ್ರತಿನಿಧಿಗಳಿಗೆ ಚುನಾವಣಾ ಪ್ರಚಾರದ ಟೆಲಿಪ್ರಸಾರ ಅಥವಾ ಬಾನುಲಿ ಪ್ರಸಾರಕ್ಕೆ ಸಮಯವನ್ನು ನೀಡುವುದನ್ನು ಪ್ರಸಾರ ಭಾರತಿಯು ಪೂರ್ವನಿಗದಿಪಡಿಸುತ್ತದೆ. ಚುನಾವಣಾ ಆಯೋಗ ಹಾಗೂ ಪಕ್ಷದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಮಯವನ್ನು ನಿಗದಿಪಡಿಸಲಾಗುತ್ತದೆ.

ಡಿಜಿಟಲೀಕರಣ ಉಪಕ್ರಮದ ಭಾಗವಾಗಿ ಚುನಾವಣಾ ಆಯೋಗವು ತೀರಾ ಇತ್ತೀಚೆಗೆ ರಾಜಕೀಯ ಪಕ್ಷಗಳ ಹಣಕಾಸು ಖಾತೆಗಳ ವಿವರಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಲು ಜಾಲತಾಣವೊಂದನ್ನು ಸ್ಥಾಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News