ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾದ ವಿಗ್ರಹ ತುಂಡುಗಳ ಬಗ್ಗೆ ಸಂಶಯ

Update: 2024-01-27 03:23 GMT

Photo: PTI

ವಾರಾಣಾಸಿ: ಜ್ಞಾನವಾಪಿ ಆವರಣದ ಅವಶೇಷಗಳ ರಾಶಿಯಲ್ಲಿ ಪತ್ತೆಯಾದ ವಿಗ್ರಹಗಳ ತುಂಡುಗಳನ್ನು ಈ ಕಟ್ಟಡದ ಬಾಡಿಗೆ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿದ್ದ ಶಿಲ್ಪಿಗಳು ಹಾಕಿರುವ ಸಾಧ್ಯತೆ ಇದೆ ಎಂದು ಮಸೀದಿಯ ಪರಿಪಾಲನೆ ನಿರ್ವಹಿಸುತ್ತಿರುವ ಅಂಜುಮನ್ ಇಂತಿಝಾಮಿಯಾ ಮಸಾಜಿದ್ (ಎಐಎಂ)ಸಮಿತಿ ಶುಕ್ರವಾರ ಹೇಳಿದೆ.

ಆದರೆ ಇಂಥ ವಾದಕ್ಕೆ ಯಾವ ಆಧಾರವೂ ಇಲ್ಲ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಸ್ಪಷ್ಟನೆ ನೀಡಿದ್ದಾರೆ. ಜ್ಞಾನವಾಪಿ ಎಎಸ್ಐನ ವೈಜ್ಞಾನಿಕ ಸಮೀಕ್ಷೆ ವರದಿಯು ಆವರಣದ ಒಳಗಡೆ ಇದ್ದ ಅವಶೇಷಗಳ ರಾಶಿಯಲ್ಲಿ ಪತ್ತೆಯಾದ ಪ್ರತಿ ವಿಗ್ರಹ ಮತ್ತು ಕಲಾಕೃತಿಗಳ ವಯಸ್ಸು, ಯುಗ, ಗಾತ್ರ ಮತ್ತು ಇತರ ಎಲ್ಲ ಸೂಕ್ತ ವಿವರಗಳನ್ನು ನಿರ್ದಿಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ.

ಎಎಸ್ಐ ವರದಿಯ ಪ್ರತಿಯನ್ನು ವಾದಿ ಹಾಗೂ ಪ್ರತಿವಾದಿಗಳಿಗೆ ನೀಡಿದ ಬೆನ್ನಲ್ಲೇ ಈ ವಾಗ್ವಾದ ಆರಂಭವಾಗಿದೆ. 17ನೇ ಶತಮಾನದಲ್ಲಿ ಮಸೀದಿ ನಿರ್ಮಾಣ ಮಾಡುವ ಮೊದಲು ಜ್ಞಾನವಾಪಿ ಜಾಗದಲ್ಲಿ ಹಿಂದೂ ಮಂದಿರ ಇತ್ತು ಎಂದು ಎಎಸ್ಐ ವರದಿಯಲ್ಲಿ ವಿವರಿಸಲಾಗಿದೆ.

ಎಎಸ್ಐ ವರದಿಯ ಅಧ್ಯಯನಕ್ಕೆ ಕಾನೂನು ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಎಐಎಂ ಹೇಳಿದೆ. ಇಲ್ಲಿ ದೇವಾಲಯ ಇತ್ತು ಎನ್ನುವ ಬಗ್ಗೆ ಹಿಂದೂಗಳು ಮಾಡಿರುವ ಪ್ರತಿಪಾದನೆಗೆ ಯಾವುದೇ ಹೊಸ ಶೋಧನೆಯ ಆಧಾರ ಇಲ್ಲ ಎಂದು ಎಐಎಂ ವಕೀಲ ಅಖ್ಲಾಕ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News